*ಗೋಣಿಕೊಪ್ಪಲು : ಜಾನಪದ ಪರಿಷತ್ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಪೊನ್ನಂಪೇಟೆ ಹೋಬಳಿ ಘಟಕದ ಅಧ್ಯಕ್ಷರಾಗಿ ಚೇಂದಂಡ ಸುಮಿ ಸುಬ್ಬಯ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ನಾಯ್ಡು ಆಯ್ಕೆಯಾಗಿದ್ದಾರೆ.
ಕಾಮತ್ ನವಮಿ ಸಭಾಂಗಣದಲ್ಲಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಅನಂತಶಯನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು ಉಪಾಧ್ಯಕ್ಷರಾಗಿ ಎಂ.ಜಿ. ಮೋಹನ್,ಡಾ. ಆಶಿಕ್ಚಂಗಪ್ಪ, ಚಮ್ಮಟೀರ ಪ್ರವೀಣ್ ಉತ್ತಪ್ಪ, ರಾಮದಾಸ್, ಅಬ್ದುಲ್ ನಾಸೀರ್, ಬಿ.ವಿ. ದೇಚಮ್ಮ, ಲಯನ್ಸ್ ಅಧ್ಯಕ್ಷ ಸ್ಮರಣ್, ರಜನಿ, ಕೋಶಾಧಿಕಾರಿಯಾಗಿ ಜ್ಯೋತಿ ಕಾರ್ಯದರ್ಶಿಯಾಗಿ ಪ್ರಭು ಕುಮಾರ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಅನಂತಶಯನ ಮಾತನಾಡಿ ಜಾನಪದ ಸೃಷ್ಟಿಯ ಹುಟ್ಟಿನಿಂದಲೆ ಬೆಳೆದು ಬಂದಿದೆ. ಅಕ್ಷರ ಜ್ಞಾನ ಇಲ್ಲದೆ ಇದ್ದರು, ತಮ್ಮದೆ ಭಾಷೆಯಲ್ಲಿ ಶಬ್ದಗಳ ಬಂಡಾರವನ್ನೆ ಹುಟ್ಟುಹಾಕಿ ಸಂಸ್ಕøತಿ ಸಂಪ್ರದಾಯಗಳನ್ನು ಉಳಿಸಿಕೊಂಡು ಬರಲಾಗಿದೆ. ಜಾನಪದ ಆಚಾರವಿಚಾರಗಳಿಗೆ ಅದÀರದೇ ಆದ ನಿಲುವುಗಳು ಹೊಂದಿದ್ದು, ಅತೀ ಸಾಮಾನ್ಯ ವ್ಯಕ್ತಿಯಲ್ಲಿಯೂ ಪ್ರತಿಬೆ ಅಡಗಿರುತ್ತದೆ ಎಂದರು.
ಜನಾಂಗ, ಭಾಷೆ ಸಂಸ್ಕøತಿಯನ್ನು ಒಳಗೊಂಡ ವಿಭಿನ್ನ ಚಟುವಟಿಕೆಗಳೆ ಜಾನಪದವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಫ್ಯಾಶನ್ ಯುಗದಲ್ಲಿಯೂ ಜಾನಪದ ಆಚಾರಗಳನ್ನು ಎತ್ತಿ ಹಿಡಿದು ಉಳಿಸಿಕೊಳ್ಳಬೇಕಾಗಿದೆ. ಜಾನಪದ ಸೊಗಡನ್ನು ಪಸರಿಸಲು ಆಸಕ್ತರ ಅವಶ್ಯಕತೆ ಇದೆ. ಹೀಗಾಗಿ ಜಿಲ್ಲೆಯಲ್ಲಿ ಜಾನಪದ ಪರಿಷತನ್ನು ಹುಟ್ಟು ಹಾಕಿ ಹಂತ ಹಂತವಾಗಿ ಹೋಬಳಿ ಮಟ್ಟದಲ್ಲಿಯೂ ಜಾನಪದವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದು ಅದರ ಸೊಗಡನ್ನು ಸವಿಯಬೇಕೆಂಬದೆ ಹೋಬಳಿ ಮಟ್ಟದ ಸ್ಥಾಪಿಸಲು ಕಾರಣವಾಗಿದೆ.
ಈ ಅಭಿಲಾಷಿಯಿಂದ ಜಾನಪದದ ಬಗ್ಗೆ ಆಸಕ್ತಿ, ಕಾಳಜಿವುಳ್ಳ ವ್ಯಕ್ತಿಗಳನ್ನು ಆಯ್ದು ಜಾನಪದ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಯಾವುದೇ ಆಕಾಂಕ್ಷೆಗಳಿಲ್ಲದೆ ಜಾನಪದ ಪರಿಷತ್ ಘಟಕದಲ್ಲಿ ಅಭಿರುಚಿಯ ಸೇವೆ ನೀಡುವ ಮೂಲಕ ಹಿರಿಯರು ಬಳುವಳಿಯಾಗಿ ಬಿಟ್ಟುಹೋದ ಜಾನಪದದ ವೈಭವದ ಸಿರಿಯನ್ನು ಉಳಿಸಿಕೊಳ್ಳಲು ಕಾರ್ಯೋನ್ಮುಖ ರಾಗಬೇಕು. ಎಂದು ಸಲಹೆ ನೀಡಿದರು.
ಜಿಲ್ಲಾ ಜಾನಪದಪರಿಷತ್ ಉಪಾಧ್ಯಕ್ಷ ಚಿ.ನಾ. ಸೋಮೇಶ್ ಮಾತನಾಡಿ ಜಾನಪದ ಎನ್ನುವದು ಬಹುದೊಡ್ಡ ಅನುಭವದ ಅಧ್ಯಯನವಾಗಿದೆ.ನಮ್ಮ ಹಿರಿಯರ ನಡೆನುಡಿಗಳಿಂದಲೇ ಹುಟ್ಟಿಕೊಂಡ ಅದ್ಭುತವೇ ಜಾನಪದ. ಜನಾಂಗದ ಆಚಾರಗಳಿಂದ ಸಂಸ್ಕøತಿ ಸಂಪ್ರದಾಯಗಳಿಂದ ಹುಟ್ಟಿಕೊಂಡ ವಿಭಿನ್ನತೆಯೆ ಜಾನಪದವಾಗಿ ಉಳಿದುಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾನಪದ ಪರಿಷತ್ ಉಪಾಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಎಂಎನ್. ಚಂದ್ರಮೋಹನ್, ರಾಣಿಮಾಚಯ್ಯ ಸೇರಿದಂತೆ ಪ್ರಮುಖರಾದ ಡಾ. ಶಿವಪ್ಪ, ಪ್ರಮೀಳ ನಾಚಯ್ಯ ಅರುವತ್ತೋಕ್ಲು ಗ್ರಾ.ಪಂ ಸದಸ್ಯೆ ನವನೀತ್, ಜಮುನಾ ವಸಂತ್, ಹೋಸೂರು ಗ್ರಾ.ಪಂ ಅಧ್ಯಕ್ಷ ,ಕೊಲ್ಲೀರ ಗೋಪಿ ಚಿನ್ನಪ್ಪ,ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಹಾಜರಿದ್ದರು.
ವರದಿ : ಎನ್.ಎನ್. ದಿನೇಶ್