ಸಿದ್ದಾಪುರ, ಜ. 17: ಕ್ರಿಶ್ಚಿಯನ್ ಧರ್ಮಿಯರಿಗಾಗಿ ಅಮ್ಮತ್ತಿಯಲ್ಲಿ ರೋಮನ್ ಕ್ಯಾಥೋಲಿಕ್ ಬಾಯ್ಸ್ ಸಂಘದ ವತಿಯಿಂದ ಫೆ8, ರಿಂದ 10ರ ವರೆಗೆ ಆರ್‍ಸಿಬಿ ಕ್ರಿಶ್ಚಿಯನ್ ಕಪ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿ ಕೊಂಡಿರುವದಾಗಿ ಸಂಘದ ಅಧ್ಯಕ್ಷ ಆಂಟಣಿ ಜೋಬಿ ತಿಳಿಸಿದ್ದಾರೆ. ಅಮ್ಮತ್ತಿಯ ಸರಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಕ್ರಿಶ್ಚಿಯನ್ ಸಮುದಾಯದವರಿಗೆ ಮಾತ್ರ ಭಾಗವಹಿಸಲು ಅವಕಾಶ ಇರುವದಾಗಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಥಮ ಬಹುಮಾನ ರೂ.30,000 ಹಾಗೂ ದ್ವಿತೀಯ ಬಹುಮಾನ ರೂ. 15,000 ಮತ್ತು ಟ್ರೋಫಿ ನೀಡಲಾಗುವದು. ಫೆ2 ರವರೆಗೆ ಮಾತ್ರ ಹೆಸರು ನೋಂದಾಯಿಸಲು ಅವಕಾಶವಿದ್ದು, ಭಾಗವಹಿಸುವ ತಂಡಗಳು 9449982960, 8123823860, 8296147027 ಸಂಖ್ಯೆಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಿದ್ದಾರೆ. ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ನಿಕ್ಸನ್ ಮತ್ತು ಖಜಾಂಚಿ ಸುಜಿತ್ ಡಿಸೋಜಾ ಇದ್ದರು.