ವೀರಾಜಪೇಟೆ, ಜ. 16 : ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ತಾ. 17ರಿಂದ ( ಇಂದಿನಿಂದ ) 19ರವರೆಗೆ ಶ್ರವಣದೋಷ ಹಾಗೂ ಮಾತುಬಾರದ ಅಂಗವಿಕಲರಿಗೆ ಮೂರು ದಿನಗಳ ಕಾಲ ತಜ್ಞರಿಂದ ತರಬೇತಿ ನೀಡಲಾಗುವದು ಎಂದು ಜಿಲ್ಲಾ ಅಂಗವಿಕಲ ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಬೆಂಗಳೂರಿನ ಎಡಿಪಿ ಸಂಸ್ಥೆ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.