ಸೋಮವಾರಪೇಟೆ, ಜ. 14: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವಕ್ಕೆ ನಿನ್ನೆ ಸಂಜೆ ವಿದ್ಯುಕ್ತ ಚಾಲನೆ ನೀಡಲಾಯಿತು. ಬೆಳ್ಳಿ ಬಂಗಾರದ ದಿನದಂದು ಜಾತ್ರಾ ಪ್ರಾರಂಭೋತ್ಸವ ಪೂಜೆ, ಧರ್ಮದರ್ಶಿ ಮಂಡಳಿ ಮತ್ತು ಗ್ರಾಮಸ್ಥರಿಂದ ಜಾತ್ರಾ ಪ್ರಾರಂಭ ಪೂಜೆ, ಪ್ರಾರ್ಥನೆ ಮೂಲಕ ಪ್ರಸಕ್ತ ವರ್ಷದ ಉತ್ಸವಕ್ಕೆ ಚಾಲನೆ ದೊರೆಯಿತು.ನಿನ್ನೆ ರಾತ್ರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ‘ಪಾಪು-ಬಾಪು’ ನಾಟಕ ಜರುಗಿತು. ಇಂದು ಮಕರ ಸಂಕ್ರಮಣ ಕರುವಿನ ಹಬ್ಬದ ಅಂಗವಾಗಿ ಸಂಜೆ ಗರುಡಗಂಭದ ಅಗ್ರಪೀಠದಲ್ಲಿ ಬೆಳ್ಳಿ ಬಂಗಾರದ ದಿನದಂದು ಜಾತ್ರಾ ಪ್ರಾರಂಭೋತ್ಸವ ಪೂಜೆ, ಧರ್ಮದರ್ಶಿ ಮಂಡಳಿ ಮತ್ತು ಗ್ರಾಮಸ್ಥರಿಂದ ಜಾತ್ರಾ ಪ್ರಾರಂಭ ಪೂಜೆ, ಪ್ರಾರ್ಥನೆ ಮೂಲಕ ಪ್ರಸಕ್ತ ವರ್ಷದ ಉತ್ಸವಕ್ಕೆ ಚಾಲನೆ ದೊರೆಯಿತು.ನಿನ್ನೆ ರಾತ್ರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ‘ಪಾಪು-ಬಾಪು’ ನಾಟಕ ಜರುಗಿತು. ಇಂದು ಮಕರ ಸಂಕ್ರಮಣ ಕರುವಿನ ಹಬ್ಬದ ಅಂಗವಾಗಿ ಸಂಜೆ ಗರುಡಗಂಭದ ಅಗ್ರಪೀಠದಲ್ಲಿ (ಮೊದಲ ಪುಟದಿಂದ) ತುಪ್ಪದ ನಂದಾದೀಪ ಬೆಳಗಿಸಲಾಯಿತು. ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ ನಡೆದವು.

ತಾ. 15 ರಂದು (ಇಂದು) ಪೂರ್ವಾಹ್ನ 11.50 ರಿಂದ ಅರಸು ಬಲ ಸೇವೆ, ಸಂಜೆ 7.30 ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ನಡೆಯಲಿದ್ದು, ತಾ. 16 ರಂದು ಮಧ್ಯಾಹ್ನ 12.05ಕ್ಕೆ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ 60ನೇ ಮಹಾ ರಥೋತ್ಸವ ಜರುಗಲಿದೆ. ನಂತರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ.

ಇದರೊಂದಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡೊಳ್ಳುಕುಣಿತ, ಕಂಸಾಳೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ, ವೇದಮೂರ್ತಿ ಶಿಬರೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಲಿವೆ.

ತಾ. 17 ರಂದು ಮಹಾ ಸಂಪ್ರೋಕ್ಷಣೆ, ವಿವಿಧ ಅರ್ಚನೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ, ಮಂಗಳ ಪ್ರಾರ್ಥನೆ ನಡೆಯಲಿದೆ. ಅಂದು ಬೆಳಿಗ್ಗೆ 10 ರಿಂದ 12.30 ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಪರಾಹ್ನ 2 ಗಂಟೆಗೆ ಜಾತ್ರಾ ಮುಕ್ತಾಯ ಸಮಾರಂಭ ನಡೆಯಲಿದೆ. ಜಾತ್ರೋತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ದೇವಾಲಯ ಆವರಣವನ್ನು ಶೃಂಗರಿಸಲಾಗಿದೆ.

ಇಂದು ಕ್ರೀಡಾಕೂಟ: ಮಹಾರಥೋತ್ಸವದ ಅಂಗವಾಗಿ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ತಾ. 15 (ಇಂದು) ಮತ್ತು 16 ರಂದು ಅಂತರ್‍ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟಗಳು ನಡೆಯಲಿದೆ.