ನಾಪೋಕ್ಲು, ಜ. 16: ಕೊಟ್ಟಮುಡಿ ಸೇತೆುವೆ ಕಡೆಯಿಂದ ನಾಪೋಕ್ಲು ಪಟ್ಟಣಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಭರದಿಂದ ಸಾಗಿದೆ. ಕೊಟ್ಟಮುಡಿ ಜಂಕ್ಷನ್‍ನಿಂದ ನಾಪೋಕ್ಲು ಪಟ್ಟಣಕ್ಕೆ ತೆರಳುವ ಮುಖ್ಯ ರಸ್ತೆ ಸುಮಾರು ಎರಡು ಕಿ.ಮೀ. ನಷ್ಟು ತೀರಾ ಹದಗೆಟ್ಟಿದ್ದು, ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭಗೊಂಡಿದೆ. ನಾಪೋಕ್ಲು ಪಟ್ಟಣದಿಂದ ಹಳೆ ಪೋಸ್ಟ್ ಆಫೀಸ್‍ವರೆಗಿನ ರಸ್ತೆಯ ಮರುಡಾಂಬರಿಕರಣಕ್ಕಾಗಿ ಸುಮಾರು ರೂ. 60 ಲಕ್ಷ ಬಿಡುಗಡೆಯಾಗಿದ್ದು, ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಲಾಗುವದು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಹಾಗೂ ಸದಸ್ಯ ಎಂ.ಪಿ. ಕುಶು ಕುಶಾಲಪ್ಪ ಹೇಳಿದರು.