ಮಡಿಕೇರಿ, ಜ. 16: ಕೊಡಗಿನ ಮಳೆಗೆ ತೀವ್ರ ತೊಂದರೆಗೊಳಗಾಗಿದ್ದೂ ಸುಮಾರು 34 ದನಗಳನ್ನು ಸಾಕುತ್ತಿರುವ ತಾಳತ್ತಮನೆ ನಿವಾಸಿ ಅರಿಯಂಡ ರಮೇಶರಿಗೆ ಕೊಡಗು ಹವ್ಯಕ ವಲಯ,ಕೊಡಗು ಗೋ ಪರಿವಾರದ ಸಹಯೋಗದಲ್ಲಿ ಸುಮಾರು 1ಲೋಡ್ ಹುಲ್ಲು ಹಸ್ತಾಂತರಿಸಲಾಯಿತು. ಶ್ರೀ ಮಜ್ಜಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನಾನುಸಾರ ಗ್ರಾ. ಪಂ.ಉಪಾಧ್ಯಕ್ಷ ರತೀಶ ಕುಮಾರ್, ಶಾಂತಪ್ಪ ರೈ, ಸತೀಶ ಅವರುಗಳ ಸಹಕಾರದೊಂದಿಗೆ ಎಂ.ಎಂ.ನರೇಂದ್ರ ಅವರು ನೀಡಿದ ಮೇವನ್ನು ನೀಡಲಾಯಿತು.
ವಲಯದ ಪರವಾಗಿ ಅಧ್ಯಕ್ಷ ನಾರಾಯಣ ಮೂರ್ತಿ, ಕಾರ್ಯದರ್ಶಿ ರಾಜಾರಾಮ, ಉದಯ ಚೆಯ್ಯಂಡಾಣೆ,ಕೊಡಗು ಗೋ ಪರಿವಾರದ-ಟೌನ್ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜಗದೀಶ್ ಉಪಸ್ಥಿತರಿದ್ದರು.