ವೀರಾಜಪೇಟೆ, ಜ. 14: ವೀರಾಜಪೇಟೆಯ ಗೋಣಿಕೊಪ್ಪ ರಸ್ತೆಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದ ಬೇಕರಿಯಲ್ಲಿ ಸಿಂಗಲ್ ನಂಬರಿನ ಮಟ್ಕಾ ಹೆಸರಿನಲ್ಲಿ ಜೂಜಾಟದಲ್ಲಿ ತೊಡಗಿದ್ದ ಶಿವಲಿಂಗ, ಅನಿಲ್ ಕುಮಾರ್ ಹಾಗೂ ಅಶೋಕ್ ಮಾರ್ಲಾ ಎಂಬ ಮೂವರನ್ನು ನಗರ ಪೊಲೀಸರ ತಂಡ ಬಂಧಿಸಿ ಪಣಕ್ಕಿಟ್ಟಿದ್ದ ರೂ 42,800 ನಗದು ಹಣವನ್ನು ವಶ ಪಡಿಸಿಕೊಂಡಿದೆ.
ಗೋಣಿಕೊಪ್ಪ ರಸ್ತೆಯ ನಿವಾಸಿಗಳು ನೀಡಿದ ಸುಳಿವಿನ ಮೇರೆ ಡಿ.ವೈ.ಎಸ್.ಪಿ. ನಾಗಪ್ಪ ಅವರ ನಿರ್ದೇಶನದಂತೆ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಮಾರ್ಗದರ್ಶನದಲ್ಲಿ ಸಂತೋಷ್ ಕಶ್ಯಪ್, ಪೊಲೀಸ್ ಸಿಬ್ಬಂದಿಗಳಾದ ಮುನೀರ್, ರಚನ್ ಮತ್ತಿತರರು ಭಾಗವಹಿಸಿದ್ದರು.