ಭಾಗಮಂಡಲ, ಜ. 16: ಇಲ್ಲಿನ ಭಗಂಡೇಶ್ವರ ದೇವಾಲಯದ ಮುಖ್ಯದ್ವಾರ ಹಾಗೂ ಹಿಂಬದಿ ದ್ವಾರಕ್ಕೆ ಸುಮಾರು 15 ಲಕ್ಷ ವೆಚ್ಚದಲ್ಲಿ ಬಾಗಿಲುಗಳು ನಿರ್ಮಾಣವಾಗಿದ್ದು ಸದ್ಯದಲ್ಲಿಯೇ ಇದರ ಅಳವಡಿಕೆ ಹಾಗೂ ಉದ್ಘಾಟನೆ ನಡೆಯಲಿದೆ. ಮಡಿಕೇರಿಯ ನಿವಾಸಿ ಮಂಡೀರ ದೇವಿಪೂಣಚ್ಚ ಅವರು ತಮ್ಮ ತಂದೆ ಅಪ್ಪಚ್ಚ ಹಾಗೂ ತಾಯಿ ಬೋಜಮ್ಮ ಅವರ ಜ್ಞಾಪಕಾರ್ಥವಾಗಿ ದೇವಾಲಯಕ್ಕೆ ಬಾಗಿಲುಗಳನ್ನು ನೀಡಿದ್ದಾರೆ. ಈ ಸಂದರ್ಭ ಮಂಡೀರ ದೇವಿಪೂಣಚ್ಚ, ಪಟ್ಟಮಾಡ ಉದಯ್, ಸಂಪತ್‍ಕುಮಾರ್, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಮತ್ತಿತರರು ಇದ್ದರು. ಭಗಂಡೇಶ್ವರ ದೇವಾಲಯದ ಜೀರ್ಣೋದ್ಧಾರದ ಬಳಿಕ ಬಾಗಿಲುಗಳ ಅವಶ್ಯಕತೆ ಇದ್ದುದನ್ನು ಮನಗಂಡ ದಾನಿ (ಮೊದಲ ಪುಟದಿಂದ) ಮಂಡೀರ ದೇವಿಪೂಣಚ್ಚ ಅವರು ಬಾಗಿಲುಗಳನ್ನು ದಾನವಾಗಿ ನೀಡಿದ್ದಾರೆ. ಬಾಗಿಲುಗಳು ದೇವರು ಹಾಗೂ ಋಷಿಮುನಿಗಳ ಚಿತ್ರಣ ಹೊಂದಿದ್ದು, ಕುಕ್ಕೆ ಸುಬ್ರಹ್ಮಣ್ಯದ ಧನಂಜಯ ಆಚಾರಿ ಮತ್ತು ತಂಡ ಸುಮಾರು ಆರು ತಿಂಗಳಿನಿಂದ ಶ್ರಮವಹಿಸಿ ಕೆತ್ತನೆ ಕೆಲಸ ಮಾಡಿದ್ದಾರೆ.