ಸೋಮವಾರಪೇಟೆ, ಜ. 14: ಮೈಸೂರಿನ ಟ್ರಾವೆಲ್ ಕೆ.ಎಂ. ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಬೆಂಗಳೂರು ಬಸವನಗುಡಿಯಲ್ಲಿರುವ ಅಚಿವ್ ಸ್ಕೂಲ್ ಆಫ್ ಎಜುಕೇಷನ್ ಸಂಸ್ಥೆಯ ವಿದ್ಯಾರ್ಥಿಗಳ ಪರಿಸರ ಸಂರಕ್ಷಣೆ ಜಾಗೃತಿ ಸೈಕಲ್ ಜಾಥಾ ಶುಕ್ರವಾರ ಪಟ್ಟಣಕ್ಕೆ ಆಗಮಿಸಿತು.

15 ಮಂದಿ ಬಾಲಕಿಯರು, 13 ಬಾಲಕರು, ಮೂವರು ಶಿಕ್ಷಕರು ಜಾಥಾದಲ್ಲಿದ್ದರು. ವಿದ್ಯಾರ್ಥಿಗಳಿಗೆ ಕಾಫಿ ತೋಟ ನಿರ್ವಹಣೆಗಳ ಬಗ್ಗೆ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಪಕ್ಷಿಗಳ ಬಗ್ಗೆಯೂ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ನಂತರ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತೆರಳಿದರು. ಪ್ರಾಯೋಜಕರಾದ ಪ್ರಶಾಂತ್, ಭರತ್, ಅಶ್ವಿನ್ ಇದ್ದರು.