ಸುಂಟಿಕೊಪ್ಪ, ಜ. 14: ಇಲ್ಲಿಗೆ ಸಮೀಪದ ಗದ್ದೆಹಳ್ಳ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತರಾದ ಕುಮಾರಿ ಎ.ಪಿ. ಮೀನಾಕ್ಷಿ ಇವರಿಗೆ ನಾಕೂರು ಶಿರಂಗಾಲ, ಕಾನ್ಬೈಲ್ ಗ್ರಾಮದ ಲಕ್ಷ್ಮಿ ಒಕ್ಕಲಿಗರ ಮಹಿಳಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಕೆ.ಎನ್. ದೇವಕ್ಕಿ, ಉಪಾದ್ಯಕ್ಷೆ ಜಾಜೀ, ಒಕ್ಕಲಿಗರ ಸ್ವಸಹಾಯ ಸಹಕಾರ ಸದಸ್ಯರಾದ ಕೆ.ಎನ್. ನಂಜಪ್ಪ ಎಲ್.ಎಂ. ಮಂಜುನಾಥ, ಎ.ಪಿ. ಧರ್ಮಪ್ಪ ಮತ್ತಿತರರು ಹಾಜರಿದ್ದರು.