ವೀರಾಜಪೇಟೆ, ಜ. 14: ವೀರಾಜಪೇಟೆಯ ಗಾಂಧಿನಗರದ ಕೊಡವ ಒಕ್ಕೂಟದಿಂದ ನಿವೇಶನ ಕೋರಿ ಇಲ್ಲಿನ ತಾಲೂಕು ತಹಶೀಲ್ದಾರ್‍ಗೆ ಒಕ್ಕೂಟದ ಅಧ್ಯಕ್ಷ ಕುಯ್ಮಂಡ ಕಾವೇರಪ್ಪ ಮನವಿ ಸಲ್ಲಿಸಿದರು.
ಕಳೆದ 18 ವರ್ಷಗಳ ಹಿಂದೆ ಸಮುದಾಯದ ಹಿತಾಸಕ್ತಿ ಬೇಕು ಬೇಡಿಕೆಗಳು ಹಾಗೂ ಸಮಾಜ ಸೇವೆಗಾಗಿ ಒಕ್ಕೂಟವನ್ನು ರಚಿಸಲಾಗಿದ್ದು, ಈಗಾಗಲೇ ಒಕ್ಕೂಟದ ವತಿಯಿಂದ ಅನೇಕ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗೆ ಉತ್ತರ ಕೊಡಗಿನಲ್ಲಿ ಸಂಭವಿಸಿದ ನೆರೆ ಸಂತ್ರಸ್ತರಿಗೂ ಪರಿಹಾರವನ್ನು ವಿತರಿಸಲಾಗಿದೆ. ಒಕ್ಕೂಟದ ಇನ್ನು ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ನಡೆಸಲು ಸ್ವಂತ ಕಟ್ಟಡಕ್ಕಾಗಿ ಗಾಂಧಿನಗರದಲ್ಲಿಯೇ ಖಾಲಿ ಇರುವ ಪೈಸಾರಿ ಜಾಗವನ್ನು ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ ಎಂದು ಕಾವೇರಪ್ಪ ತಿಳಿಸಿದರು.
ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕ ಗಾಂಧಿನಗರದ ಮಾಳೇಟಿರ ಕಾಶಿ ಕುಂಞಪ್ಪ, ಕಾಳೇಂಗಡ ಜೈನ್ ತಿಮ್ಮಯ್ಯ, ಕರ್ತಮಾಡ ಬೆಳ್ಳಿಯಪ್ಪ ಹಾಜರಿದ್ದರು.