ಕುಶಾಲನಗರ, ಜ. 14: ಮಕರ ಸಂಕ್ರಾಂತಿ ಅಂಗವಾಗಿ ಕುಶಾಲನಗರ ದಲ್ಲಿ ತಾ. 15 ರಂದು (ಇಂದು) ಸಂಕ್ರಾಂತಿ ಸಂಭ್ರಮ 2019 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯೆ ರೂಪಾ ಉಮಾಶಂಕರ್ ಮತ್ತು ವಾರ್ಡ್ ನಾಗರಿಕರ ನೇತೃತ್ವದಲ್ಲಿ ಸೋಮವಾರಪೇಟೆ ತಾಲೂಕು ಜನಪದ ಪರಿಷತ್ ಹಾಗೂ ಕುಶಾಲನಗರ ಹಿತರಕ್ಷಣಾ ಸಮಿತಿ ಸಹಯೋಗದೊಂದಿಗೆ ಸ್ಥಳೀಯ ಪೊಲೀಸ್ ಗ್ರೌಂಡ್‍ನಲ್ಲಿ ಮಧ್ಯಾಹ್ನ 2.30 ರಿಂದ ಗ್ರಾಮೀಣ ಕ್ರೀಡಾಸ್ಪರ್ಧೆ, ಗೋಪೂಜೆ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ವಿ.ಎನ್. ಉಮಾಶಂಕರ್ ತಿಳಿಸಿದ್ದಾರೆ.