ಚೆಟ್ಟಳ್ಳಿ, ಜ. 14: ಕಳೆದ ಮೂರು ದಿನಗಳಿಂದ ಮಡಿಕೇರಿಯಲ್ಲಿ ಕೊಡಗು ಪ್ರವಾಸಿ ಉತ್ಸವ ನಡೆಯಿತು. ಜನರು ತಂಡೋಪತಂಡವಾಗಿ ಬಂದರೆ, ರಾಜಸೀಟಿನಲ್ಲಿ ಹೂವಿನ ಅಲಂಕಾರ, ಪ್ರಾಣಿ ಪಕ್ಷಿಗಳ ಚಿತ್ತಾರ ಒಂದೆಡೆಯಾದರೆ ಗಾಂಧಿ ಮೈದಾನದಲ್ಲಿನ ಕಾರ್ಯಕ್ರಮಗಳೆಲ್ಲ ಜನ ಮೆಚ್ಚುಗೆಗೆ ಕಾರಣವಾದವು...

ಆದರೆ ರಾಜಸೀಟಿನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ರಾಷ್ಟ್ರ ಕವಿ ಕುವೆಂಪು ಪ್ರತಿಮೆಯ ಮುಂದೆ ಜನರೆಲ್ಲ ಸೆಲ್ಫಿ ತೆಗೆದುಕೊಳ್ಳುವ ಬರದಲ್ಲಿ ಪುತ್ಥಳಿಯ ಎಡಗೈ ಮುರಿದು ಕೆಳಗೆ ಬಿದ್ದಿರುವ ದೃಶ್ಯ ಕಂಡುಬಂದಿತು. ಆದರೂ ಸೆಲ್ಫಿಗೆ ಜನ ಮಾರು ಹೋಗಿದ್ದರು. -ಕರುಣ್ ಕಾಳಯ್ಯ