ಗೋಣಿಕೊಪ್ಪ ವರದಿ, ಜ. 14 : ರಾಷ್ಟ್ರಮಟ್ಟದ ಬಿ. ಡಿವಿಜನ್ ಪುರುಷರ ಹಾಕಿ ಚಾಂಪಿಯನ್‍ಶಿಪ್‍ನ 4 ನೇ ಪಂದ್ಯದಲ್ಲಿ ಹಾಕಿಕೂರ್ಗ್ ತಂಡವು ಗೆಲವು ದಾಖಲಿಸುವ ಮೂಲಕ ಹುಮ್ಮಸ್ಸಿನಲ್ಲಿದೆ. ತಾ. 16 ರಂದು ಆಲ್ ಇಂಡಿಯಾ ಪೊಲೀಸ್ ತಂಡದ ವಿರುದ್ಧ ಗೆಲ್ಲುವ ಅನಿವಾರ್ಯತೆಯಲ್ಲಿದೆ.
ಚೆನ್ನೈ ಐಸಿಎಫ್ ಮೈದಾನದಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆದ 4 ನೇ ಪಂದ್ಯದಲ್ಲಿ ಸ್ಟೀಲ್ ಪ್ಲಾಂಟ್ ಸ್ಪೋಟ್ರ್ಸ್ ಬೋರ್ಡ್ ವಿರುದ್ಧದ ಪಂದ್ಯದಲ್ಲಿ 2-1 ಗೋಲುಗಳ ಪ್ರ್ರಯಾಸದ ಗೆಲವು ದಾಖಲಿಸಿತು. ಕೂರ್ಗ್ ಪರ 6 ನೇ ನಿಮಿಷದಲ್ಲಿ ಡಿ. ಎಂ. ಅಚ್ಚಯ್ಯ, 31 ನೇ ನಿಮಿಷದಲ್ಲಿ ಮೋಕ್ಷಿತ್ ಉತ್ತಪ್ಪ ತಲಾ ಒಂದೊಂದು ಗೋಲು ಹೊಡೆದು ಗೆಲುವಿನ ದಡ ಸೇರಿಸಿದರು. ಸ್ಟೀಲ್ ಪ್ಲಾಂಟ್ ಪರ 18 ನೇ ನಿಮಿಷದಲ್ಲಿ ಕುಮಾರ್ ಅಮಿತ್ ಏಕೈಕ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು. ಲೀಗ್‍ನ ಕೊನೆಯ ಪಂದ್ಯದಲ್ಲಿ ಗೆಲ್ಲುವ ಅನಿವಾರ್ಯತೆ ಇದ್ದು, ಇಂದಿನ ಗೆಲವು ಕ್ವಾರ್ಟರ್ ಫೈನಲ್ ಕನಸು ಮೂಡಿಸಿದೆ.