ಮಡಿಕೇರಿ, ಜ. 16: ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸಪಟ್ಟಣ ಗ್ರಾಮದ ಚಂಗಚಂಡ ರಶ್ಮಿ ನಿತಿನ್ ಅವರು ‘ಯುವ ಕಾವ್ಯ ಪ್ರತಿಭಾ ಪ್ರಶಸ್ತಿ 2019’ ಯನ್ನು ಸ್ವೀಕರಿಸಿದ್ದಾರೆ.