ಭಾಗಮಂಡಲ, ಜ. 16: ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಯಜುಸಂಹಿತ ಯಾಗ ( ಕೃಷ್ಣಯಜುರ್ವೇದ) ಹಾಗೂ ಚಂಡಿಕಾ ಹೋಮ ನಡೆಸಲಾಯಿತು. ಶಾಪ ವಿಮೋಚನೆಗಾಗಿ ಕೊಡವ ಮತ್ತು ಅಮ್ಮಕೊಡವ ಜನಾಂಗದವರು ಸೇರಿ ಜನಾಂಗದ ಶಾಪವಿಮೋಚನೆ ಪರಿಹಾರ ಹಾಗೂ ಲೋಕಕಲ್ಯಾಣಕ್ಕಾಗಿ ಶ್ರೀಕಾವೇರಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಇದು ಆರನೇ ವರ್ಷದ ಕಾರ್ಯಕ್ರಮವಾಗಿದೆ.

ಈಶ್ವರ ಭಟ್ ನೇತೃತ್ವದಲ್ಲಿ ಭಗಂಡೇಶ್ವರ ಸನ್ನಿಧಿಯಲ್ಲಿ ಶತರುದ್ರ ನಡೆಯಿತು. ಬಳಿಕ ಹೋಮ, ಚಂಡಿಕಾ ಹೋಮ, ಹಾಗೂ ಸತ್ಯನಾರಾಯಣ ಪೂಜೆ ನೆರವೇರಿತು. ಶತರುದ್ರ ಕಾರ್ಯಕ್ರಮದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಉಪಾಧ್ಯಕ್ಷ ಚೆಪ್ಪುಡಿರ ಎಂ.ಪೊನ್ನಪ್ಪ, ಮನೆಯಪಂಡ ಶಾಂತಿ ಸತೀಶ್, ಪಾಲಿ ಅಯ್ಯಪ್ಪ, ಬೀನಾಬೊಳ್ಳಮ್ಮ, ಉಮಾಪ್ರಭು, ಪೃಥ್ವಿ, ಸತ್ಯ, ಮುತ್ತಣ್ಣ, ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಭಕ್ತರು ಉಪಸ್ಥಿತರಿದ್ದರು.