ಶನಿವಾರಸಂತೆ, ಜ. 16: ಸಮೀಪದ ಆಲೂರು-ಸಿದ್ದಾಪುರ ಕೂರ್ಗ್ ಹಂಟರ್ ಟೀಮ್ ವತಿಯಿಂದ ಮಕರ ಸಂಕ್ರಾಂತಿ ಹಬ್ಬ ಪ್ರಯುಕ್ತ ಮುಕ್ತ ಟೆನ್ನಿಸ್ ಬಾಲ್ ಮತ್ತು ಕ್ರಿಕೆಟ್ ಟೂರ್ನಿ ತಾ. 19 ಮತ್ತು 20 ರಂದು ಸರಕಾರಿ ಪ್ರಾಥಮಿಕ ಶಾಲಾ ಗ್ರಾಮೀಣ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿಜೇತ ಕ್ರಿಕೆಟ್ ತಂಡಗಳಿಗೆ ಪ್ರಥಮ ಬಹುಮಾನ ರೂ. 16 ಸಾವಿರ ಮತ್ತು ಟ್ರೋಫಿ, ದ್ವಿತೀಯ ರೂ. 10 ಸಾವಿರ ಮತ್ತು ಟ್ರೋಫಿ ಹಾಗೂ ತೃತೀಯ ರೂ. 4 ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ಉತ್ತಮ ಬೌಲರ್, ಬ್ಯಾಟ್ಸ್‍ಮನ್, ಫೀಲ್ಡರ್ ಹಾಗೂ ಆಲ್‍ರೌಂಡರ್‍ಗೆ ಪ್ರತ್ಯೇಕ ಟ್ರೋಫಿಯನ್ನು ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 8073809038 ಸಂಪರ್ಕಿಸಬಹುದಾಗಿದೆ.