ಚೆಟ್ಟಳ್ಳಿ, ಜ. 16: ಕೆ.ಕೆ.ಎಫ್.ಸಿ. ಚೆಟ್ಟಳ್ಳಿ ವತಿಯಿಂದ 6ನೇ ವರ್ಷದ ಮುಕ್ತ ಕಾಲ್ಚೆಂಡು ಪಂದ್ಯಾಟ, ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‍ನ ಸಹಯೋಗದಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ 9+3 ಆಟಗಾರರೊಂದಿಗೆ ತಾ. 24 ರಿಂದ 27 ರವರೆಗೆ ನಡೆಯಲಿದೆ.

ಪಂದ್ಯಾಟದ ಉದ್ಘಾಟನೆಯನ್ನು ಬೆಳಿಗ್ಗೆ 9 ಗಂಟೆಗೆ ಕೊಡುಗು ಜಿಲ್ಲಾ ಗೌಡ ಸಮಾಜದ ಅಧ್ಯಕ್ಷ ಪಿ.ಪಿ. ಜಯಾನಂದ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಿದ್ದಾರೆ. ಪಂದ್ಯಾಟವನ್ನು ತೇಲಪಂಡ ಶಿವಕುಮಾರ್ ನಾಣಯ್ಯ ಮಾಡಲಿದ್ದಾರೆ.

ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಚೆಟ್ಟಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ತಿಲಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಕೆ.ಕೆ.ಎಫ್.ಸಿ. ಅಧ್ಯಕ್ಷ ಮಹಮ್ಮದ್ ರಫಿ, ಉಪಾಧ್ಯಕ್ಷ ಶಶಿಕುಮಾರ್, ಗೌರವಾಧ್ಯಕ್ಷ ರೆಮಂಡ್ ಸೆರಾವೋ, ಕಾರ್ಯದರ್ಶಿ ಜುಬೈರ್ ಪಾಲ್ಗೊಳ್ಳಲಿದ್ದಾರೆ.

ತಾ. 27 ರಂದು ನಡೆಯುವ ಸಮಾರೋಪ ಸಮಾರಂಭ ಮಧ್ಯಾಹ್ನ 3.30 ಕ್ಕೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಅಯ್ಯಪ್ಪ, ಕಾರ್ಮಿಕ ಮುಖಂಡರುಗಳಾದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ, ಗುತ್ತಿಗೆದಾರ ಮಂಜುನಾಥ್, ಎಸ್.ಎನ್.ಡಿ.ಪಿ. ವಾಸು ಮೊದಲಾದವರು ಭಾಗವಹಿಸಲಿದ್ದಾರೆ.

ಪ್ರಥಮ ಬಹುಮಾನ ಟ್ರೋಫಿ ಹಾಗೂ ರೂ. 25 ಸಾವಿರ ನಗದು ವೈಯಕ್ತಿಕ ಟ್ರೋಫಿಗಳು, ದ್ವಿತೀಯ ಬಹುಮಾನ ರೂ. 15 ಸಾವಿರ ವೈಯಕ್ತಿಕ ಟ್ರೋಫಿಗಳು, ತೃತೀಯ ಬಹುಮಾನ ಟ್ರೋಫಿ ಹಾಗೂ ಮಹಿಳೆಯರ ಪ್ರದರ್ಶನ ಪಂದ್ಯಾಟ ಏರ್ಪಡಿಸಲಾಗಿದೆ.

ಪಂದ್ಯಾಟಕ್ಕೆ ಮೊದಲು ನೋಂದಾಯಿಸಿದ 30 ತಂಡಗಳಿಗೆ ಮಾತ್ರ ಅವಕಾಶವಿದ್ದು, ತಾ. 17 ರೊಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ 8277560862, 9480494700 ಸಂಪರ್ಕಿಸಬೇಕಾಗಿ ಪತ್ರಿಕಾ ಪ್ರಕಟಣೆ ತಿಳಿಸಿದೆ.