ಮೈಸೂರು ಪೊಲೀಸರಿಂದ ತನಿಖೆ

ಕುಶಾಲನಗರ, ಜ. 13: ಕುಶಾಲನಗರದಲ್ಲಿ ಇತ್ತೀಚೆಗೆ ನಡೆದ ಖಾಸಗಿ ವೈದ್ಯರ ನಿಗೂಢ ಹತ್ಯೆ ಪ್ರಕರಣವನ್ನು ಮೈಸೂರು ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ವಹಿಸಲಾಗಿದೆ. ಡಿಸೆಂಬರ್ 9 ರಂದು ಕುಶಾಲನಗರ ಸಮೀಪ ಕೊಪ್ಪದಲ್ಲಿ ಡಾ. ದಿಲೀಪ್‍ಕುಮಾರ್ ಅವರ ಹತ್ಯೆ ನಡೆದಿದ್ದು ಪ್ರಕರಣದ ತನಿಖೆ ನಡೆಯುತ್ತಿದ್ದ ಸಂದರ್ಭ ಮಡಿಕೇರಿಯ ಯುವಕನೊಬ್ಬ ಆತ್ಮಹತ್ಯೆ ಮಾಡಿದ್ದು ಈ ಹಿನ್ನಲೆಯಲ್ಲಿ ತನಿಖಾ ತಂಡದ ಮೇಲೆ ಪೊಲೀಸ್ ದೂರು ದಾಖಲಾಗಿತ್ತು. ಪ್ರಕರಣದ ಹೆಚ್ಚಿನ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಮೈಸೂರು ಡಿಸಿಐಬಿಗೆ ಹಸ್ತಾಂತರಿಸಲಾಗಿದೆ.