ಗೋಣಿಕೊಪ್ಪಲು, ಜ. 13: ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಅತೀ ದೊಡ್ಡ ಸಮಾಜ ಸೇವಾ ಸಂಸ್ಥೆಯಾಗಿ ಗುರುತಿಸಿ ಕೊಂಡಿರುವ ವೈಸ್‍ಮನ್ ಇಂಟರ್ ನ್ಯಾಶನಲ್ ಸಂಸ್ಥೆ ನಿಯೋಜಿತ ಅಧ್ಯಕ್ಷ ಬಿ. ರತ್ನಾಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೊಡಗಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಇತ್ತೀಚೆಗೆ ಗೋಣಿಕೊಪ್ಪಲು ಸಮೀಪದ ಅತ್ತೂರು ಫಾಮ್‍ವ್ಯಾಲ್ಯೂ ರೆಸಾರ್ಟ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ 15 ನೂತನ ಸದಸ್ಯರು ಪದಗ್ರಹಣ ಸ್ವೀಕರಿಸಿದರು. ಮುಂದಿನ ಯೋಜನೆಗಳ ಬಗ್ಗೆ ನೂತನ ಅಧ್ಯಕ್ಷ ಬಿ. ರತ್ನಾಕರ್ ಶೆಟ್ಟಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಪ್ಸ್ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊ. ನಂಜುಂಡ ಅವರನ್ನು ಸನ್ಮಾನಿಸಲಾಯಿತು. ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದ ಹಾಗೂ ಅಪಘಾತದಲ್ಲಿ ತೊಂದರೆಗೀಡಾದ ಇಬ್ಬರು ವ್ಯಕ್ತಿಗಳಿಗೆ ಸಹಾಯ ಧನವನ್ನು ನೀಡಲಾಯಿತು. ಸಮಾಜ ಸೇವೆ, ಸಾಂಸ್ಕøತಿಕ ಅಭಿವೃದ್ಧಿ, ನಾಯಕತ್ವ, ಗುಣ, ಪ್ರೋತ್ಸಾಹ, ಮಾನವೀಯತೆ, ವಿಷಯಗಳಲ್ಲಿ ಸದಸ್ಯರು ತಮ್ಮನ್ನು ತೊಡಗಿಸಿಕೊಳ್ಳುವಂತೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ನಿವೃತ್ತ ಮೇಜರ್ ಜನರಲ್ ಕೆ.ಪಿ. ನಂಜಪ್ಪ ಕರೆ ನೀಡಿದರು. ಬೆನ್ನಿ ಅಲೆಕ್ಸ್ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ನಿರ್ಗಮಿತ ವಲಯ ನಿರ್ದೇಶಕರಾದ ಜೋಸ್ ಜಾರ್ಜ್ ಕಮ್ಯೂನಿಟಿ ಸರ್ವಿಸ್ ಪ್ರಾಜೆಕ್ಟ್ ಉದ್ಘಾಟಿಸಿದರು. ಜಿಲ್ಲಾ ಗವರ್ನರ್ ಟಿ.ಎ. ಪೌಲೋಸ್ ಧ್ವಜ ಹಸ್ತಾಂತರಿಸಿದರು. ಕಾರ್ಯಕ್ರಮವನ್ನು ವಲಯ ನಿರ್ದೇಶಕ ಟಿ.ಕೆ. ರಮೇಶ್ ಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇರಿಟಿಯ ವೈಸ್‍ಮೆನ್ ಇಂಟರ್‍ನ್ಯಾಶನಲ್ ಅಧ್ಯಕ್ಷರಾದ ಬೆನ್ನಿ ಅಲೆಕ್ಸ್ ನಿರ್ಗಮಿತ ಕೌನ್ಸಿಲ್ ಸದಸ್ಯ, ಕೆ.ಎಂ. ಸ್ಕಾರಿಯೇಚನ್ ಜಂಟಿ ಕಾರ್ಯದರ್ಶಿ ಟಿ.ಜೆ. ಆ್ಯಂಟೋನಿ, ಉಪಾಧ್ಯಕ್ಷರಾದ ಸಿಬಿ.ಪಿ ಖಜಾಂಚಿ ರಶೀದ್ ಕೆ.ಪಿ. ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯದರ್ಶಿ ವೈ.ಎಂ. ಮನೋಜ್ ಸ್ವಾಗತಿಸಿ, ರಾಬಿನ್ ಆಂಟೋಣಿ ವಂದಿಸಿದರು.