ಗೋಣಿಕೊಪ್ಪ ವರದಿ, ಜ. 13 : ರಾಷ್ಟ್ರಮಟ್ಟದ ಬಿ. ಡಿವಿಜನ್ ಪುರುಷರ ಹಾಕಿ ಚಾಂಪಿಯನ್ಶಿಪ್ನಲ್ಲಿ 19 ಗೋಲು ದಾಖಲಿಸಿ ಮುನ್ನುಗ್ಗುತ್ತಿರುವ ಹಾಕಿಕೂರ್ಗ್ ತಂಡ ತನ್ನ 3 ನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಉಳಿದ ಕೊನೆಯ 2 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಚೆನ್ನೈ ಐಸಿಎಫ್ ಮೈದಾನದಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆಯುತ್ತಿರುವ 3 ನೇ ಪಂದ್ಯದಲ್ಲಿ ಸ್ಪೋಟ್ರ್ಸ್ ಅಥಾರಿಟಿ ತಂಡದ ವಿರುದ್ಧ 1-1 ಗೋಲುಗಳ ಡ್ರಾ ಸಾಧನೆ ಮೂಲಕ ನಿರಾಸೆ ಮೂಡಿಸಿದೆ. ಕೂರ್ಗ್ ಪರ 33 ನೇ ನಿಮಿಷದಲ್ಲಿ ಎಸ್.ಪಿ. ದೀಕ್ಷಿತ್ ಪೆನಾಲ್ಟಿ ಕಾರ್ನರ್ನ್ನು ಗೋಲಾಗಿ ಪರಿವರ್ತಿಸಿ ಡ್ರಾ ಮಾಡುವಲ್ಲಿ ಸಫಲರಾದರು. ಸ್ಪೋಟ್ರ್ಸ್ ಅಥಾರಿಟಿ ಪರ 15 ನೇ ನಿಮಿಷದಲ್ಲಿ ಅಂತಿಲ್ ಅಕ್ಷಯ್ 1 ಗೋಲು ಹೊಡೆದರು. ಟೂರ್ನಿಯಲ್ಲಿ ಇಲ್ಲಿವರೆಗೆ ಎಸ್.ಪಿ. ದೀಕ್ಷಿತ್ 3 ಗೋಲು ಹೊಡೆದಿದ್ದಾರೆ.
ಆಲ್ ಇಂಡಿಯಾ ಪೊಲೀಸ್ ಹಾಗೂ ಜೀಲ್ ತಂಡಗಳ ನಡುವೆ ಮುಂದಿನ ಹಣಾಹಣಿ ನಡೆಯಲಿದ್ದು, ಈ ಎರಡು ಪಂದ್ಯಗಳನ್ನು ಗೆದ್ದರಷ್ಟೆ ಹಾಕಿಕೂರ್ಗ್ ತಂಡ ನಾಕೌಟ್ಗೆ ಪ್ರವೇಶ ಪಡೆಯಲಿವೆ.
ತಂಡದ ವ್ಯವಸ್ಥಾಪಕರಾಗಿ ಪಳಂಗಂಡ ಲವಕುಮಾರ್, ತರಬೇತುದಾರರಾಗಿ ಬೊಳ್ಳಂಡ ರೋಶನ್ ಪಾಲ್ಗೊಂಡಿದ್ದಾರೆ.