ಶನಿವಾರಸಂತೆ, ಜ. 13: ನಮ್ಮ ಹಿಂದಿನ ಸಂಪ್ರದಾಯ, ಆಚಾರ-ವಿಚಾರ, ಸಂಸ್ಕøತಿ ಎಲ್ಲವನ್ನು ನಾವಿಂದು ಪಠ್ಯದಲ್ಲಿ ಕಲಿಯು ವಂತಾಗಿದೆ ಎಂದು ಸ್ಥಳೀಯ ಪ.ಪೂ. ಕಾಲೇಜಿನ ಉಪನ್ಯಾಸಕ ಸೋಮಶೇಖರ್ ಅಭಿಪ್ರಾಯ ಪಟ್ಟರು.
ಸಮೀಪದ ಹಂಡ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಯಾಡಿದರು.
ವಿದ್ಯೆ ಇಂದು ವಿದ್ಯಾರ್ಥಿಯಲ್ಲಿ ಅಹಂಕಾರ ಮೂಡಿಸುತ್ತಿದೆ. ಆದರೆ ವಿದ್ಯೆಗೆ ವಿನಯವೇ ಭೂಷಣ ವಾಗಿದ್ದು, ಗೌರವ ಮೂಡಿಸು ವಂತಿರಬೇಕು. ಎನ್ಎಸ್ಎಸ್ ಶಿಬಿರದಲ್ಲಿ ಪಾಲ್ಗೊಳ್ಳುವದರಿಂದ ವಿದ್ಯಾರ್ಥಿಗಳು ಸಹಕಾರ, ಸರಳ ಜೀವನ ಮತ್ತು ಸಾಮಾಜಿಕ ಜವಾಬ್ದಾರಿ ಇತ್ಯಾದಿ ಉತ್ತಮ ವಿಚಾರಗಳನ್ನು ಕಲಿತು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಹಕಾರಿ ಯಾಗುತ್ತದೆ ಎಂದರು.
ವಿಘ್ನೇಶ್ವರ ಪ್ರೌಢಶಾಲೆ ಶಿಕ್ಷಕ ಕೆ.ಪಿ. ಜಯಕುಮಾರ್, ನಿವೃತ್ತ ಉಪಪ್ರಾಂಶುಪಾಲ ಎಸ್.ಪಿ. ರಾಜ ಹಾಗೂ ಬೆಳೆಗಾರ ವೀರೇಂದ್ರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶು ಪಾಲ ಈ.ಎಂ. ದಯಾನಂದ್ ಮಾತನಾಡಿ, ಶಿಬಿರಾರ್ಥಿಗಳು ಹಂಡ್ಲಿ ಗ್ರಾಮ ಪ್ರೌಢಶಾಲೆಯ ಆಟದ ಮೈದಾನ, ದೇವಸ್ಥಾನದ ಆವರಣ ವನ್ನು ಸ್ವಚ್ಛಗೊಳಿಸುವ ಮೂಲಕ ಶಿಬಿರದ ಉದ್ದೇಶವನ್ನು ಸಾರ್ಥಕ ಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾ.ಪಂ. ಸದಸ್ಯ ಎಸ್.ಪಿ. ಬಸವರಾಜ್, ಪಿಡಿಓ ಸ್ಮಿತಾ, ಮುಖ್ಯ ಶಿಕ್ಷಕಿ ನಳಿನಿ, ಶಿಕ್ಷಕ ಕೆ. ವಿಕ್ರಾಂತ್, ಪ್ರಮುಖರಾದ ವಿ.ಸಿ. ಸುರೇಶ್, ದಿನೇಶ್ ಮಾಲಂಬಿ ಉಪಸ್ಥಿತರಿದ್ದರು.