ಮಡಿಕೇರಿ, ಜ. 13: ಕದನೂರು-ಬೋಯಿಕೇರಿಯಲ್ಲಿರುವ ಕದನೂರು-ಕೊಟ್ಟೋಳಿ ಕೊಡವ ಸಂಘದ 15ನೇ ವಾರ್ಷಿಕೋತ್ಸವ ವೀರಾಜಪೇಟೆಯ ಕೊಡವ ಸಮಾಜದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಸಂಘದ ಅಧ್ಯಕ್ಷೆ ಅಮ್ಮಣಿಚಂಡ ಗಂಗಮ್ಮ ಬೆಳ್ಳಿಯಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾತಂಡ ಪಿ. ಮೊಣ್ಣಪ್ಪ, ಕುಂಬೆರ ರಮೇಶ್ ಅಯ್ಯಪ್ಪ, ಆಪಾಡಂಡ ಕಸ್ತೂರಿ ಕಾರ್ಯಪ್ಪ, ಮಾಳೇಟಿರ ವಿಶಾಲು ಗೋಪಾಲ್, ಪಳಂಗಂಡ ರಮೇಶ್ ಇವರು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಇತ್ತೀಚೆಗೆ ನಿವೃತ್ತರಾದ ಚೆನಿಯಪಂಡ ಸನ್ನಿ ಅಪ್ಪಯ್ಯ ಹಾಗೂ ಹಾಕಿಪಟು ಅಮ್ಮಣಿಚಂಡ ದೀಕ್ಷಿತ ಚರ್ಮಣ ಇವರನ್ನು ಸನ್ಮಾನಿಸಲಾಯಿತು. ಇದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಸಾಲಿನಲ್ಲಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕೋಣೇರಿರ ಗ್ಯಾನ್ ಬೋಪಣ್ಣ (ಎಸ್.ಎಸ್. ಎಲ್.ಸಿ. -ಸಿಬಿಎಸ್ಇ), ಕೊಟ್ಟಂಗಡ ನಿತ್ಯಗಣಪತಿ (ಎಸ್.ಎಸ್.ಎಲ್.ಸಿ.-ಸ್ಟೇಟ್ ಸಿಲಬಸ್), ಅಮ್ಮಣಿಚಂಡ ದಿಂಪಲ್ ಸುಬ್ರಮಣಿ (ಎಸ್.ಎಸ್. ಎಲ್.ಸಿ.-ಸ್ಟೇಟ್ ಸಿಲಬಸ್), ಕೊಂಗೇರಿರ ಪ್ರಥಮ್ (ಎಸ್.ಎಸ್. ಎಲ್.ಸಿ.-ಸ್ಟೇಟ್ ಸಿಲಬಸ್), ಅಮ್ಮಣಿಚಂಡ ಶಿಭಾನಿ ರಾಜಪ್ಪ (ಬಿ.ಕಾಂ.), ಅಮ್ಮಣಿಚಂಡ ಮಂಥನ್ ಕಾರ್ಯಪ್ಪ (ಬಿಸಿಎ), ಕೋಣೇರಿರ ಸೋಮಣ್ಣ (ಬಿ.ಇ) ಹಾಗೂ ಕ್ರೀಡಾಕ್ಷೇತ್ರದಲ್ಲಿ ಅಮ್ಮಣಿಚಂಡ ಬೆವನ್ ಬೋಪಣ್ಣ ಇವರನ್ನು ಕೊಡವ ಸಂಘದ ಪರವಾಗಿ ಗೌರವಿಸಲಾಯಿತು. ಕೊಡವ ಸಂಘದ ಧನ ಸಹಾಯ ಪಡೆದ ಕಾಲೂರಿನ ಐಲಪಂಡ ಕವಿತ ಭೀಮಯ್ಯ ಸಂಘದ ಸಹಕಾರವನ್ನು ಮನದುಂಬಿ ನೆನೆದು ಕೃತಜ್ಞತೆ ಸಲ್ಲಿಸಿದರು.
ಸಾಂಸ್ಕøತಿಕ ಕಾರ್ಯ ಕ್ರಮದಲ್ಲಿ ಅಮ್ಮಣಿಚಂಡ ಕವಿತ ಸುಬ್ರಮಣಿ ಇವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ತಂಡದವರ ನೃತ್ಯ ಮತ್ತು ಚನಿಯಪಂಡ ಯಶಿಕಾ ಬೆಳ್ಳಿಯಪ್ಪ ಇವರ ಆಕರ್ಷಕ ನೃತ್ಯಗಳು, ಪುಟಾಣಿಗಳಾದ ನಾಯಕಂಡ ರಿಕ್ಕಿ ಕಾರ್ಯಪ್ಪ ಮತ್ತು ರೋಹನ್ ಚಿಣ್ಣಪ್ಪ ಇವರ ಕೀಬೋರ್ಡ್ ವಾದನ, ಮಾತಂಡ ಕಮಲ ಮೊಣ್ಣಪ್ಪ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಅಮ್ಮಣಿಚಂಡ ಸಮರ್ಥ್ ಕಾರ್ಯಪ್ಪ, ಪಟ್ಟಂಗಡ ರಾಧ ಗಣಪತಿ ಇವರ ಧ್ವನಿಯಲ್ಲಿ ಮೂಡಿಬಂದ ಹಾಡುಗಳು ರಂಜಿಸಿದವು. ಅಮ್ಮಣಿಚಂಡ ಚಿಂತನಾ ಚೇತನ್ ಅವರ ‘ಪಚ್ಚೆ ಪಲಂಬ್ ನಂಗಡ ಕೊಡಗು’ ಎಂಬ ಸಾಮಾಜಿಕ ನಾಟಕ ಅಮ್ಮಣಿಚಂಡ ಸೌಮ್ಯ ನವೀನ್ ಅವರ ನಿರ್ದೇಶನದಲ್ಲಿ ಮೂಡಿಬಂದು ಜನಮೆಚ್ಚುಗೆ ಪಡೆಯಿತು. ಕೊಡವ ಸಂಘದ ಮಹಿಳಾ ಸದಸ್ಯರು ದೇಶದ ಬೇರೆ ಬೇರೆ ರಾಜ್ಯಗಳ ಉಡುಪನ್ನು ಧರಿಸಿ ‘ವಿವಿಧತೆಯಲ್ಲಿ ಏಕತೆ’ಯ ಸಂದೇಶವನ್ನು ಪ್ರದರ್ಶನದ ಮೂಲಕ ಸಾರಿದರು. ಕೊಡವ ಸಂಸ್ಕøತಿಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ಅಮ್ಮಣಿಚಂಡ ರೂಪಕುಶಾಲಪ್ಪ ಮತ್ತು ಅಮ್ಮಣಿಚಂಡ ಮಂಗಳ ಪ್ರವೀಣ್ ನಡೆಸಿಕೊಟ್ಟರು.
ನಿವೃತ್ತ ಮುಖ್ಯ ಶಿಕ್ಷಕರಾದ ಕಲಿಯಂಡ ಉತ್ತಪ್ಪ ಕೊಡವ ಸಂಘದ ಕೆಲಸ ಕಾರ್ಯಗಳನ್ನು ಪ್ರಶಂಸಿಸಿ ಉತ್ತೇಜಿಸಿದರು. ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದತ್ತಿನಿಧಿಗೆ ರೂ. 20,000 ನೀಡುವ ಬಗ್ಗೆ ಘೋಷಿಸಿದರು. ಕುಂಬೆರ ಯಶೋಧ ಅಯ್ಯಪ್ಪ ಕಾರ್ಯದರ್ಶಿ ಇವರು ಇಂದಿನ ವರದಿ ವಾಚಿಸಿದರು. ಕೊಟ್ಟಂಗಡ ರಾಧಗಣಪತಿ ಪ್ರಾರ್ಥಿಸಿದರು. ಅಮ್ಮಣಿಚಂಡ ಗಂಗಮ್ಮ ಸ್ವಾಗತಿಸಿದರು. ಮುಂಡ್ಯೋಳಂಡ ಶಾರದಸುರೇಶ್ ವಂದಿಸಿದರು.
ಇದೇ ಸಂದರ್ಭದಲ್ಲಿ ಕೊಡವ ಸಂಘಕ್ಕೆ ಮುಂದಿನ ಆಡಳಿತ ಮಂಡಳಿಯ ರಚನೆಯಾಯಿತು. ಕಾರ್ಯಕ್ರಮವನ್ನು ಅಮ್ಮಣಿಚಂಡ ದರ್ಶನ್ ಅಪ್ಪಚ್ಚು ನಿರೂಪಿಸಿದರು. ಅಮ್ಮಣಿಚಂಡ ಚೇತನ್ಚಿಣ್ಣಪ್ಪ ಅವರು ಕಳೆದ ಒಂದು ಸಾಲಿನಿಂದ ಕೊಡವ ಸಂಘದ ಕಾರ್ಯ ಕ್ರಮವನ್ನು ಪವರ್ಪಾಯಿಂಟ್ ಮೂಲಕ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಪಳಂಗಂಡ ರಮೇಶ್, ಬೊಳಕಾರಂಡ ರಂಜಿ ಸುಬ್ರಮಣಿ, ಅಮ್ಮಣಿಚಂಡ ಪ್ರವೀಣ್ ಅಯ್ಯಪ್ಪ, ಅಣ್ಣಾರ್ಕಂಡ ಶರಿ ಸೋಮಣ್ಣ, ಕೋಣೇರಿರ ಡಾನ್ ಪೂವಯ್ಯ, ಕೋಣೇರಿರ ಕವಿತಾ ಸಂಪತ್, ಅಮ್ಮಣಿಚಂಡ ಸೌಮ್ಯ ನವೀನ್ ಹಾಜರಿದ್ದರು.