ಭಾಗಮಂಡಲ, ಜ. 13: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಲಾಯಿತು. ಬ್ಯಾಂಕಿನ ಆವರಣದಲ್ಲಿ ಹೊಸೂರು ಸತೀಶ್‍ಕುಮಾರ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಅಂದಾಜು ರೂ. 43 ಲಕ್ಷ ವೆಚ್ಚದಲ್ಲಿ ಬ್ಯಾಂಕಿನ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ನೂತನ ಕಟ್ಟಡದ ಕೆಳ ಅಂತಸ್ತಿನಲ್ಲಿ ಗ್ರಾಮೀಣ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರಾಟ ಮಳಿಗೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಕಟ್ಟಡ ನಿರ್ಮಾಣಕ್ಕಾಗಿ ನಬಾರ್ಡ್ ಬ್ಯಾಂಕಿನಿಂದ ರೂ. 10 ಲಕ್ಷ ಲಭಿಸಲಿದೆ. ಉಳಿದ ಹಣವನ್ನು ಬ್ಯಾಂಕಿನಿಂದ ಭರಿಸಲಾಗುವದು ಎಂದರು.

ಈ ಸಂದರ್ಭ ನಬಾರ್ಡ್ ಬ್ಯಾಂಕಿನ ಮುಂಡಂಡ ನಾಣಯ್ಯ, ವ್ಯವಸ್ಥಾಪಕಿ ಲೀಲಾವತಿ, ನಿರ್ದೇಶಕರಾದ ನಂಜುಂಡಯ್ಯ, ಕೆ.ಎನ್. ದಿನೇಶ್, ರಾಘವಯ್ಯ, ಹರಿ, ಬಾರಿಕೆ ಪುಷ್ಪ, ಸುಮಿತ್ರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.