ವೀರಾಜಪೇಟೆ, ಜ. 12: ವೀರಾಜಪೇಟೆಯ ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಸ್ಥಾನದಲ್ಲಿ ತಾ. 14 ರಂದು ಮಕರ ಜ್ಯೋತಿಯ ಪ್ರಯುಕ್ತ ಮಕರ ಸಂಕ್ರಾಂತಿ ಉತ್ಸವವನ್ನು ಆಚರಿಸಲಾಗುವದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಉತ್ಸವದ ಪ್ರಯುಕ್ತ ಬೆಳಗಿನಿಂದಲೇ ದೇವರಿಗೆ ವಿಶೇಷ ಪೂಜೆಗಳು ಜರುಗಲಿವೆ. ಸಂಜೆ 6ಗಂಟೆಗೆ ಕೇರಳದ ಚಂಡೆ ಮದ್ದಳೆಯೊಂದಿಗೆ ಉತ್ಸವ ಮೂರ್ತಿ ದೇವಾಲಯದ ಸುತ್ತ ಪ್ರದಕ್ಷಿಣೆ (ತಡಂಬು) ಕಾರ್ಯಕ್ರಮ ಏರ್ಪಡಿಸಲಾಗಿದೆ. 6.45 ಗಂಟೆಗೆ ಮಹಾ ಪೂಜಾ ಸೇವೆ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.