ಮಡಿಕೇರಿ, ಜ. 12: ಮೂರ್ನಾಡು ಪದವಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಗಳು ಕೈಗಾರಿಕಾ ಭೇಟಿಗಾಗಿ ಮೈಸೂರಿನ ಇನ್‍ಫೋಸಿಸ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ಹಲವಾರು ವ್ಯವಸ್ಥೆಗಳಿಂದ ವಂಚಿತರಾಗಿರುತ್ತಾರೆ. ಪದವಿಯ ನಂತರ ವೃತ್ತಿ ಜೀವನವನ್ನು ಪ್ರಾರಂಭಿಸಲು ಸೂಕ್ತವಾದ ಮಾರ್ಗ ಕಾಣದೆ ಇರುವಲ್ಲೆ ಅಲೆದಾಡುವ ಸ್ಥಿತಿ ಇರುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಇಂತಹ ಕೈಗಾರಿಕಾ ಭೇಟಿ ಅನಿವಾರ್ಯವಾಗಿರುತ್ತದೆ. ಮೈಸೂರಿನ ಇನ್‍ಫೋಸಿಸ್‍ಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸಿನೊಂದಿಗೆ ಬದುಕಿಗೆ ಹೊಸ ಭರವಸೆಯು ದೊರಕಿದಂತಾಯಿತು. ಪದವಿಯ ನಂತರ ತಮ್ಮ ಜೀವನವನ್ನು ಇಲ್ಲೂ ಹುಡುಕಬಹುದು ಎಂಬ ಮಾಹಿತಿ ತಿಳಿದುಕೊಂಡರು.
ವಿದ್ಯಾರ್ಥಿಗಳನ್ನು ಸದೃಢರನ್ನಾಗಿ ಮಾಡಲು ಹಾಗೂ ಹೊಸ ಬದುಕನ್ನು ಕಟ್ಟಿಕೊಳ್ಳಲು ಇಂತಹ ಭೇಟಿ ಉಪಯುಕ್ತವಾಗುತ್ತದೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದರು.