ಗೋಣಿಕೊಪ್ಪಲು, ಜ. 12: ಗೋಣಿಕೊಪ್ಪ ಉಪ ವಿಭಾಗದ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯು ಗೋಣಿಕೊಪ್ಪಲುವಿನ ಚೆಸ್ಕಾಂ ಕಚೇರಿಯಲ್ಲಿ ಚಾಮರಾಜ ನಗರ ಕೊಡಗು ವೃತ್ತದ ಚೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಉಮೇಶ್ ಅಧ್ಯಕ್ಷತೆಯಲ್ಲಿ ಜರುಗಿತು.

ದ.ಕೊಡಗಿನ ಶ್ರೀಮಂಗಲ, ಬಾಳೆಲೆ, ಮಾಯಮುಡಿ, ದೇವರ ಪುರ, ಟಿ.ಶೆಟ್ಟಿಗೇರಿ, ಬಲ್ಯ ಮುಂಡೂರು, ಪೊನ್ನಂಪೇಟೆ ಭಾಗದ ವಿದ್ಯುತ್ ಗ್ರಾಹಕರು ಆಗಮಿಸಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ವೋಲ್ಟೇಜ್ ಸಮಸ್ಯೆ, ನೌಕರರ ಸಮಸ್ಯೆ ಬಗ್ಗೆ ಶ್ರೀಮಂಗಲ ರೈತ ಸಂಘದ ಜಿಲ್ಲಾ ಸಂಚಾಲಕರಾದ ಚಿಮ್ಮಂಗಡ ಗಣೇಶ್ ಗಣಪತಿ ಮಾಹಿತಿ ನೀಡಿದರು. ರೈತರಿಗೆ ಅನುಕೂಲ ವಾಗುವಂತೆ ವಿದ್ಯುತ್ ಒದಗಿಸುವಂತೆ ಮನವಿ ಮಾಡಿದರು. ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಅಪಾಯದಲ್ಲಿರುವ ಬಗ್ಗೆ ಮಾಹಿತಿ ನೀಡಿದರು. ಈ

ಗೋಣಿಕೊಪ್ಪಲು, ಜ. 12: ಗೋಣಿಕೊಪ್ಪ ಉಪ ವಿಭಾಗದ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯು ಗೋಣಿಕೊಪ್ಪಲುವಿನ ಚೆಸ್ಕಾಂ ಕಚೇರಿಯಲ್ಲಿ ಚಾಮರಾಜ ನಗರ ಕೊಡಗು ವೃತ್ತದ ಚೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಎಸ್. ಉಮೇಶ್ ಅಧ್ಯಕ್ಷತೆಯಲ್ಲಿ ಜರುಗಿತು.

ದ.ಕೊಡಗಿನ ಶ್ರೀಮಂಗಲ, ಬಾಳೆಲೆ, ಮಾಯಮುಡಿ, ದೇವರ ಪುರ, ಟಿ.ಶೆಟ್ಟಿಗೇರಿ, ಬಲ್ಯ ಮುಂಡೂರು, ಪೊನ್ನಂಪೇಟೆ ಭಾಗದ ವಿದ್ಯುತ್ ಗ್ರಾಹಕರು ಆಗಮಿಸಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ವೋಲ್ಟೇಜ್ ಸಮಸ್ಯೆ, ನೌಕರರ ಸಮಸ್ಯೆ ಬಗ್ಗೆ ಶ್ರೀಮಂಗಲ ರೈತ ಸಂಘದ ಜಿಲ್ಲಾ ಸಂಚಾಲಕರಾದ ಚಿಮ್ಮಂಗಡ ಗಣೇಶ್ ಗಣಪತಿ ಮಾಹಿತಿ ನೀಡಿದರು. ರೈತರಿಗೆ ಅನುಕೂಲ ವಾಗುವಂತೆ ವಿದ್ಯುತ್ ಒದಗಿಸುವಂತೆ ಮನವಿ ಮಾಡಿದರು. ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಅಪಾಯದಲ್ಲಿರುವ ಬಗ್ಗೆ ಮಾಹಿತಿ ನೀಡಿದರು.