ಗೋಣಿಕೊಪ್ಪ ವರದಿ, ಜ. 12 : ಯುವ ಸಮೂಹ ಸೈಬರ್ ಕ್ರೈಂ ವಿಚಾರದಲ್ಲಿ ಹೆಚ್ಚು ಜಾಗೃತರಾಗುವದು ಮುಖ್ಯವಾಗಿದೆ ಎಂದು ಮೈಸೂರು ವಲಯ ಐಜಿಪಿ ಕೆ. ವಿ. ಶರತ್‍ಚಂದ್ರ ಅಭಿಪ್ರಾಯಪಟ್ಟರು.ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದೊಂದಿಗೆ ಉದ್ಯೋಗ ನೀಡುವ ಅವಕಾಶ ಹೆಚ್ಚಾಗಬೇಕಿದೆ. ಇದರಿಂದ ಉದ್ಯೋಗ ಗಿಟ್ಟಿಸಿಕೊಳ್ಳುವ ಅವಕಾಶ ಹೆಚ್ಚಾಗಲಿದೆ ಎಂದರು. ಯುವ ಸಮೂಹ ಸೈಬರ್ ಕ್ರೈಂ ವಿಚಾರದಲ್ಲಿ ಹೆಚ್ಚು ಜಾಗೃತರಾಗುವದು ಮುಖ್ಯವಾಗಿದೆ. ಮೊಬೈಲ್, ಡೆಬಿಟ್ ಕಾರ್ಡ್ ದುರ್ಬಳಕೆಯಿಂದ ಆಗುತ್ತಿರುವ ಕ್ರೈಂ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.ಕೂರ್ಗ್ ಪಬ್ಲಿಕ್ ಶಾಲೆ ನಿವೃತ್ತ ಪ್ರಾಂಶುಪಾಲ ಎಂ.ಡಿ.ನಂಜುಂಡ ಮಾತನಾಡಿ, ಯಾವ ಭಾಷಾ ಮಾಧ್ಯಮದಲ್ಲಿ ನಾವು ಶಿಕ್ಷಣ ಪಡೆಯುತ್ತಿದ್ದೇವೆ ಎಂಬದಕ್ಕಿಂತ ಆ ಭಾಷೆಯ ಬಗ್ಗೆ ನಾವು ಎಷ್ಟು ಜ್ಞಾನ ಸಂಪಾದಿಸಿದ್ದೇವೆ ಎಂಬದು ಮುಖ್ಯವಾಗಬೇಕು. ಭಾಷಾ ಜ್ಞಾನಕ್ಕೆ ಹೆಚ್ಚು ಒತ್ತು ನೀಡುವ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಸಾಮಥÀ್ರ್ಯಕ್ಕೆ ಅನುಗುಣವಾಗಿ ಗುರಿ ಸಾಧಿಸುವ ಛಲ ಇರಬೇಕು ಎಂದರು.

ಗೋಣಿಕೊಪ್ಪ ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಮಂದೆಯಂಡ ವನಿತ್‍ಕುಮಾರ್ ಮಾತನಾಡಿ, ವಿವೇಕಾನಂದರು

(ಮೊದಲ ಪುಟದಿಂದ) ಜಗತ್ತಿನಲ್ಲಿ ಹೆಚ್ಚು ಪ್ರಸಿಧ್ಧಿ ಸಾಧಿಸಲು ಅವರ ನಾಲ್ಕು ಯೋಗಗಳಾದ ಕರ್ಮ ಯೋಗ, ಭಕ್ತಿ ಯೋಗ, ರಾಜಾಯೋಗ ಹಾಗೂ ಜ್ಞಾನಯೋಗಗಳು ಕಾರಣವಾಯಿತು. ಇದೇ ರೀತಿ ಯುವ ಸಮೂಹ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಯೋಗಗಳ ಪ್ರ್ರಾಕಾರಗಳನ್ನು ಅಳವಡಿಸಿಕೊಂಡು ಬೆಳೆಯಬೇಕಾಗಿದೆ. ಆ ಮೂಲಕ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಶಿಸ್ತು ಕಾಪಾಡಿಕೊಳ್ಳಬಹುದು. ನಮ್ಮ ಸಾವಿನ ನಂತರವೂ ಜೀವಂತವಾಗಿರುವಂತ ಸೇವೆ ನೀಡಬೇಕು ಎಂದರು.

ಸಾವಿರಾರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಭಾವಚಿತ್ರ ಹೊತ್ತು ಪೊನ್ನಂಪೇಟೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಸಾರಿದರು. ವಿವೇಕಾನಂದರ ಬಗ್ಗೆ ನಾಟಕ, ಪ್ರಾರ್ಥನೆ ಹಾಗೂ ಅವರ ಆದರ್ಶ ಗುಣಗಳನ್ನು ತಿಳಿಸಲಾಯಿತು.

ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ಮೆರವಣಿಗೆ ಮೂಲಕ ಬಸ್ ನಿಲ್ದಾಣಕ್ಕಾಗಿ ದಾರಿಯಲ್ಲಿ ಸಾಗಿ ಬಂದು ರಾಮಕೃಷ್ಣ ಶಾರದಾಶ್ರಮದ ಆವರಣದಲ್ಲಿ ಜಮಾವಣೆಗೊಂಡು ಸ್ವಾಮಿ ವಿವೇಕಾನಂದ ಮತ್ತು ಆಧುನಿಕ ಯುವ ಪೀಳಿಗೆ ಕುರಿತು ರ್ಯಾಲಿಯಲ್ಲಿ ಸಂದೇಶ ಸಾರಲಾಯಿತು.

ಪೊನ್ನಂಪೇಟೆ, ಗೋಣಿಕೊಪ್ಪ, ಬೆಕ್ಕೆಸೊಡ್ಲೂರು ಸೇರಿದಂತೆ ಸುತ್ತಮುತ್ತಲ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಪಾಲ್ಗೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಪಾಲ್ಗೊಂಡು ವಿಶೇಷತೆ ಮೂಡಿಸಿದರು.

ಆಶ್ರಮದ ಶಾಂಭವನಂದಾ ಸಭಾಂಗಣದಲ್ಲಿ ಗದ್ಧಾಧರ್ ಅಭ್ಯುದಯ ಪ್ರಕಲ್ಪ ತಂಡದಿಂದ ವಿವೇಕಾನಂದರ ನಾಟಕ ಪ್ರದರ್ಶನಗೊಂಡಿತು. ಚಿಕಾಗೋ ಸಮ್ಮೇಳನದಲ್ಲಿ ವಿವೇಕಾನಂದರು ನೀಡಿದ ಉಪನ್ಯಾಸ ಕಾರ್ಯಕ್ರಮವನ್ನು ನಾಟಕದಲ್ಲಿ ಅನಾವರಣಗೊಳಿಸಲಾಯಿತು. ಸ್ವಾಗತ ನೃತ್ಯದಲ್ಲಿ ಗದ್ಧಾಧರ್ ಅಭ್ಯುದಯ ಪ್ರಕಲ್ಪ ತಂಡವು ಶ್ರೀಗಣೇಶಾದೇವ ಎಂಬ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲಾ ತಂಡವು ವಿವೇಕಾನಂದರ ವೇಷ ತೊಟ್ಟು ಗಮನ ಸೆಳೆದರು.

ಈ ಸಂದರ್ಭ ಉದ್ಯಮಿ ಮಹೇಶ್ ಜಬ್ಬರ್ದಿ, ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಭೋದಸ್ವರೂಪನಂದಜೀ ಹಾಗೂ ಸ್ವಾಮಿ ಪರಹಿತನಂದಾಜಿ ಪಾಲ್ಗೊಂಡಿದ್ದರು. -ಸುದ್ದಿಪುತ್ರ