ಸುಂಟಿಕೊಪ್ಪ,ಜ.13: ಪಟ್ಟಣದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ 3ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಹುಣಸೂರಿನ ಶಬೀರ್ ನಗರ ನಿವಾಸಿ ನದೀಮ್ ಎಂಬಾತ ಆರೋಪಿಗಳಿಗೆ ಸುಂಟಿಕೊಪ್ಪದಲ್ಲಿ ಅಕ್ರಮವಾಗಿ ಮಾರಾಟ ಮಾಡಲು 65 ಕೆ.ಜಿ. ಗೋಮಾಂಸವನ್ನು ನೀಡಿದ್ದ ಎನ್ನಲಾಗಿದೆ.

ಸುಂಟಿಕೊಪ್ಪ ಪಟ್ಟಣದ ಚೆಸ್ಕಾಂ ಕಚೇರಿ ಸಮೀಪ 40 ಕೆ.ಜಿ. ಮಾಂಸವನ್ನು ತಂದು ಮಾರಾಟ ಮಾಡುತ್ತಿದ್ದ ಸುಂಟಿಕೊಪ್ಪ 3ನೇ ವಿಭಾಗದ ತನ್‍ಸೀರ್ (25), ಅಮೀರ್ (29) ಹಾಗೂ ಇಶಾಮ್ ಎಸ್.ಎಚ್. (23) ಎಂಬವರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.