ಮಡಿಕೇರಿ, ಜ. 12: ಕೇರಳದ ಕಣ್ಣೂರಿನ ಮುಂಡ್ಯಾಡ್ ಸ್ಟೇಡಿಯಂ ನಲ್ಲಿ ನಡೆದ ಆಲ್ ಇಂಡಿಯಾ ಇನ್ವಿಟೇಷನಲ್ ಕರಾಟೆ ಟೂರ್ನಮೆಂಟ್ 2018ರ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಮೌನ ಎಂ.ಬಿ., ಫೈಟಿಂಗ್ ನಲ್ಲಿ ಪ್ರಥಮ ಮತ್ತು ಕತ್ತಾದಲ್ಲಿ ತೃತೀಯ, ಮೋಹಿತ್ ಎಂ.ಬಿ. ಫೈಟಿಂಗ್ನಲ್ಲಿ ಪ್ರಥಮ ಹಾಗೂ ಎಂ.ವೈ. ಬೆಳ್ಳಿಯಪ್ಪ ಕುಮಿತೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ ಶಾಲೆಯ ಪ್ರಾಂಶುಪಾಲ ಪಿ.ಎನ್. ವಿನೋದ್ ಹಾಗೂ ದೈಹಿಕ ಶಿಕ್ಷಕ ಕೆ.ಜಿ. ಮಿಥುನ್ ಹಾಜರಿದ್ದರು.