ಸುಂಟಿಕೊಪ್ಪ, ಜ. 12: ಮಕ್ಕಳು ಪರೀಕ್ಷೆಯನ್ನು ಎದುರಿಸುವಾಗ ಅಂಜಿಕೆಯನ್ನು ಬದಿಗಿರಿಸುವಂತೆ ಸರಕಾರಿ ಪ್ರೌಢಶಾಲೆಯ ಹತ್ತನೇ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡೆನ್ನಿಸ್ ಡಿಸೋಜ ಹೇಳಿದರು.

ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಏಕಾಗ್ರತೆ ಮುಖ್ಯ ಹಾಗೆಯೇ ಪರೀಕ್ಷೆಯ ಸಂದರ್ಭ ಭಯದ ವಾತಾವರಣದಲ್ಲಿರದೆ ಹಬ್ಬದ ರೀತಿ ಪರೀಕ್ಷೆಯನ್ನು ಸುಲಲಿತವಾಗಿ ಎದುರಿಸುವ ಮಾನಸಿಕ ಸ್ಥೈರ್ಯವನ್ನು ಅಳವಡಿಸಿ ಕೊಳ್ಳಬೇಕು. ಪ್ರಶ್ನೆ ಪತ್ರಿಕೆಯ ಸಮಯವನ್ನು ಕಾಯ್ಧಿರಿಸಿಕೊಂಡು ಉತ್ತರವನ್ನು ಬರೆದರೆ ಫಲಿತಾಂಶ ಸಕಾರಾತ್ಮಕ ವಾಗಲಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಎಸ್. ಸುನೀಲ್ ಪರೀಕ್ಷೆಗೆ ಮಕ್ಕಳು ಅಡ್ಡಿ ಅತಂಕಗಳನ್ನು ಬದಿಗಿರಿಸಿ ಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಿದ್ದಲ್ಲಿ ಯಾವದೇ ಪರೀಕ್ಷೆಯನ್ನು ಸುಲಲಿತವಾಗಿ ಎದುರಿಸಿ ಅತೀ ಹೆಚ್ಚು ಅಂಕಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷÀ ಸಿ.ಟಿ. ಸೋಮಶೇಖರ್, ಶಿಕ್ಷಕರಾದ ಎಂ.ಎನ್. ಲತಾ, ಟಿ.ಜಿ. ಪ್ರೇಮ್ ಕುಮಾರ್, ತರಗತಿ ಶಿಕ್ಷಕರಾದ ಶಾಂತ ಹೆಗಡೆ, ಟಿ. ಪವಿತ್ರ ಉಪಸ್ಥಿತರಿದ್ದರು.