ಸೋಮವಾರಪೇಟೆ, ಜ. 11: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವ ತಾ. 13 ರಿಂದ 17 ರವರೆಗೆ ನಡೆಯಲಿದ್ದು, ದೇವಾಲಯದಲ್ಲಿ ಪೂರ್ವ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.

ಈಗಾಗಲೇ ದೇವಾಲಯ ಸೇರಿದಂತೆ ಪ್ರವೇಶ ದ್ವಾರಕ್ಕೆ ಸುಣ್ಣ ಬಣ್ಣ ಬಳಿಯಲಾಗಿದ್ದು, ದೇವಾಲಯ ಆವರಣದಲ್ಲಿ ಶಾಂತಳ್ಳಿ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.

ತಾ. 13 ರಂದು ಸಂಜೆ 6.30 ರಿಂದ ಬೆಳ್ಳಿ ಬಂಗಾರದ ದಿನದಂದು ಜಾತ್ರಾ ಪ್ರಾರಂಭೋತ್ಸವ ನಡೆಯಲಿದ್ದು, ತಾ. 16 ರಂದು ಮಧ್ಯಾಹ್ನ 12.05ಕ್ಕೆ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ 60ನೇ ಮಹಾ ರಥೋತ್ಸವ ಜರುಗಲಿದೆ.