ಮಡಿಕೇರಿ, ಜ. 11: ಇಂದಿನಿಂದ ಮೂರು ದಿವಸÀ ಜರುಗಲಿರುವ ಕೊಡಗು ಪ್ರವಾಸಿ ಉತ್ಸವಕ್ಕೆ ವೈಭವೋಪೇತ ಚಾಲನೆ ಲಭಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಉದ್ಘಾಟನೆ ನೆರವೇರಿಸುವದ ರೊಂದಿಗೆ; ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ರಾಜ್ಯ, ದೇಶದ ಪ್ರವಾಸಿಗರಿಗೆ ಯಾವದೇ ತೊಂದರೆ ನೇತೃತ್ವದ ಸಮ್ಮಿಶ್ರ ಸರಕಾರ ಸ್ಥಿರವಿದ್ದು, ಈ ಸರಕಾರವೇ ಸ್ಥಿರವಾಗಿದ್ದು, ಮುಂದಿನ ಐದು ವರ್ಷವೂ ಕೊಡಗು ಪ್ರವಾಸಿ ಉತ್ಸವ ಆಚರಿಸುವದಾಗಿ ಮಾದ್ಯಮಗಳ ಪ್ರಶ್ನೆಗೆ ಸಚಿವರು ಉತ್ತರಿಸಿದರು.ಹಗಲುಗನಸು: ಸರಕಾರ ಬೀಳುವ ಗಡುವಿನೊಂದಿಗೆ ಬಿಜೆಪಿ ಮಂದಿ ಪ್ರತಿನಿತ್ಯ ಹಗಲುಗನಸು ಕಾಣುತ್ತಿದ್ದು, ಅವರ ಒಳಗಿನ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಂಡು, ಸರಕಾರದ ಬಗ್ಗೆ ಟೀಕಿಸಲಿ ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮುಂದಿನ ಲೋಕಸಭಾ ಸ್ಥಾನಗಳ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರು ನಿರ್ಧರಿಸಲಿ ದ್ದಾರೆಂದು ಸಚಿವ ಮಹೇಶ್ ಸ್ಪಷ್ಟಪಡಿಸಿದರು.
ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್ ಸೇರಿದಂತೆ ವಿವಿಧ ರಾಜಕೀಯ ಪ್ರತಿನಿಧಿಗಳು, ಇಲಾಖೆಗಳ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾವಹಿಸಿದ್ದರು.
ಫಲಪುಷ್ಪ ಪ್ರದರ್ಶನ
ಕೊಡಗು ಪ್ರವಾಸಿ ಉತ್ಸವ ಪ್ರಯುಕ್ತ ನಗರದ ರಾಜಾಸೀಟು ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಲಭಿಸಿದೆ. ವಿವಿಧ ಪುಷ್ಪ ಪ್ರದರ್ಶನಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸೋದ್ಯಮ ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಈ ಬಾರಿ ವಿಭಿನ್ನವಾಗಿ ಪ್ರವಾಸಿ ಉತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು. ಪ್ರಕೃತಿ ವಿಕೋಪಕ್ಕೆ ಸಿಲುಕಿ ಪ್ರವಾಸೋದ್ಯಮಕ್ಕೆ ಹಿನ್ನೆಡೆ ಯಾಗಿತ್ತು, ಆದ್ದರಿಂದ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಕೊಡಗು ಪ್ರವಾಸಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ಇತ್ತೀಚೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ಸಾ.ರಾ.ಮಹೇಶ್ ತಿಳಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ ನಗರದ ರಾಜಾಸೀಟು ಉದ್ಯಾನವನದಲ್ಲಿ 8 ರಿಂದ 10 ಸಾವಿರ ಸಂಖ್ಯೆಯ ವಿವಿಧ ಜಾತಿಯ ಹೂವುಗಳಾದ ಪೇಟೂನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡುಹೂ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ ಇತ್ಯಾದಿಗಳನ್ನು ಪಾತಿಯಲ್ಲಿ ನಾಟಿ ಮಾಡಲಾಗಿದೆ ಹಾಗೂ 5 ರಿಂದ-6 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ.
ಪ್ರಮುಖ ಆಕರ್ಷಣೆಗಳು: ಕೊಡಗಿನ ಕುಲದೇವತೆಯಾದ ಕಾವೇರಿ ಮಾತೆಯ ಹಾಗೂ ಮಂಟಪದ ತೀರ್ಥೋದ್ಭವದ (ಮೊದಲ ಪುಟದಿಂದ) ಕುಂಡಿಕೆಯ ಕಲಾಕೃತಿಯನ್ನು 12 ಅಡಿ ಎತ್ತರದಲ್ಲಿ ವಿವಿಧ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ. ತೋಟಗಾರಿಕೆಯಲ್ಲಿ ಹೊಸ ತಾಂತ್ರಿಕತೆಯಾದ ಜಲ ಕೃಷಿ ಮಾದರಿಯಲ್ಲಿ ಹಣ್ಣು ತರಕಾರಿ ಬೆಳೆಯುವ ಪ್ರಾತ್ಯಕ್ಷತೆಯನ್ನು ಪ್ರದರ್ಶಿಸಲಾಗಿದೆ. ಮಕ್ಕಳಿಗೆ ಮನರಂಜನೆ ನೀಡುವಂತಹ ಸ್ಪೈಡರ್ ಮ್ಯಾನ್, ಮಿಕ್ಕಿ ಮೌಸ್, ಡೊನಾಲ್ಡ್ ಡಕ್, ಡೋರಮ್ಯಾನ್ ಮಾದರಿಯಲ್ಲಿ ಹೂವು ಮತ್ತು ಎಲೆಗಳಿಂದ ತಯಾರಿಸಲಾಗಿದೆ. ಮಾವು, ಕಿತ್ತಳೆ, ಅನಾನಾಸ್ ಹಣ್ಣುಗಳು ಹಾಗೂ ದಪ್ಪ ಮೆಣಸಿನ ಕಾಯಿ ತರಕಾರಿಗಳಿಂದ ಆನೆ, ನವಿಲು, ಗಿಟಾರ್, ತಬಲ ಇತ್ಯಾದಿಗಳ ಮಾದರಿಯ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.
ಜಲಚರ ಮೀನುಗಳಾದ ಸ್ಟಾರ್‍ಫಿಷ್, ಆಕ್ಟೊಪಸ್ ಇತ್ಯಾದಿ ಕಲಾಕೃತಿಗಳನ್ನು ಹೂ ಅಲಂಕಾರಿ ಎಲೆಗಳಿಂದ ನಿರ್ಮಿಸಲಾಗಿದೆ. ತರಕಾರಿ, ಹಣ್ಣುಗಳಲ್ಲಿ ವಿವಿಧ ಆಕೃತಿಗಳಲ್ಲಿ ಗಣ್ಯ ವ್ಯಕ್ತಿಗಳ ಕೆತ್ತನೆಯ ಕಲಾಕೃತಿಗಳನ್ನು ಮಾಡಲಾಗಿದೆ. ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆ ಹಾಗೂ ಕಾಕ್‍ಟಸ್‍ಗಳ ಜೋಡಣೆ ಹಾಗೂ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಶಿವಾಜಿ, ಗಾಂಧೀಜಿ, ಸುಭಾಷ್, ಸಾವರ್ಕರ್, ಪಟೇಲ್, ಅಂಬೇಡ್ಕರ್ ಸಹಿತ ವೀರ ಸೇನಾನಿಗಳು ತರಕಾರಿಯಿಂದ ರೂಪುಗೊಂಡಿವೆ. ರಾಜಾಸೀಟು ಮಂಟಪವನ್ನು ಹಾಗೂ ಮುಂಭಾಗದ ಮುಖ್ಯದ್ವಾರವನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಕಂಗೊಳಿಸುತ್ತಿದ್ದು, ಕೊಡಗು ಪ್ರವಾಸಿ ಉತ್ಸವಕ್ಕೆ ವೈಭವದ ಕಳೆ ನೀಡಿದೆ.
ಮಳಿಗೆ ಉದ್ಘಾಟನೆ
ಕೊಡಗು ಪ್ರವಾಸಿ ಉತ್ಸವ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಒಳಗೊಂಡ ಮಾಹಿತಿ ಮಳಿಗೆಯನ್ನು ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಿದರು. ಸರ್ಕಾರದ ಹಲವು ಜನಪರ ಯೋಜನೆಗಳಾದ ಸಾಲಮನ್ನಾ, ಬಡವರ ಬಂಧು, ಕೃಷಿ ಕ್ಷೇತ್ರದ ಅಭಿವೃದ್ಧಿ ಹೀಗೆ ನಾನಾ ಯೋಜನೆಗಳ ಮಾಹಿತಿ ಒಳಗೊಂಡ ಮಳಿಗೆಯನ್ನು ಸಚಿವರು ವೀಕ್ಷಿಸಿದರು.
ಹಾಗೆಯೇ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಏರ್ಪಡಿಸಿರುವ ಗತವೈಭವದ ಕೊಡಗಿನ ಛಾಯಾಚಿತ್ರ ಪ್ರದರ್ಶನ ಮಳಿಗೆ, ಕೊಡಗು ಪ್ರಗತಿ ಪರ ಜೇನು ಕೃಷಿ ಸಹಕಾರ ಸಂಘ, ಸ್ವಚ್ಛ ಭಾರತ ಅಭಿಯಾನ, ಕೃಷಿ, ತೋಟಗಾರಿಕೆ ಇಲಾಖೆಗಳಿಂದ ನಿರ್ಮಿಸಿರುವ ಪ್ರದರ್ಶನ ಮಳಿಗೆ, ಐನ್‍ಮನೆ, ಹೊಟೇಲ್ ಕಾವೇರಿ, ಹೊಟೇಲ್ ಗ್ರೀನ್ ಲ್ಯಾಂಡ್, ಹೋಂ ಸ್ಟೇ ಅಸೋಷಿಯೇಷನ್, ಕೊಡಗು ಕಾಫಿ ಬೆಳೆಗಾರರ ಸಂಘ, ಸ್ತ್ರೀಶಕ್ತಿ ಗುಂಪುಗಳು, ಸಾಂಬಾರ ಮಂಡಳಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಹೀಗೆ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಯನ್ನು ವೀಕ್ಷಣೆ ಮಾಡಿದರು. ಮೊದಲ ದಿನವೇ ಕೊಡಗು ಮಾತ್ರವಲ್ಲದೆ, ಹೊರಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ವಿದೇಶಿ ಪ್ರವಾಸಿಗರು ರಾಜಾಸೀಟ್‍ನಲ್ಲಿ ಕಾಣಿಸಿಕೊಂಡು ಆನಂದಿಸುತ್ತಿದ್ದ ದೃಶ್ಯ ಎದುರಾಯಿತು. ಹೋಟೆಲ್ ಮಳಿಗೆಗಳಲ್ಲಿ ದೋಸೆ, ತರಕಾರಿ ಬಿರಿಯಾನಿ, ಜೋಳದ ರೊಟ್ಟಿ, ಪಾನಿಪೂರಿ, ಇಡ್ಲಿ ಒಡೆ, ಗೋಬಿ ಮಂಚೂರಿ, ವಿವಿಧ ಬಗೆಯ ಹಣ್ಣುಗಳ ತಂಪು ಪಾನೀಯ ದೊರೆಯಲಿದ್ದು, ಕಾಫಿ ಮಂಡಳಿಯಿಂದ ರೂ. 10ಕ್ಕೆ ಬಿಸಿಬಿಸಿ ಕಾಫಿಗೆ ಭಾರೀ ಬೇಡಿಕೆ ಗೋಚರಿಸಿತು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮು, ಪ್ರಬಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಪ್ರಾಚ್ಯವಸ್ತು ಇಲಾಖೆಯ ಆಯುಕ್ತ ವೆಂಕಟೇಶ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ, ಹಿರಿಯ ಸಹಾಯಕ ನಿರ್ದೇಶಕಿ ದೇವಕಿ, ಸಹಾಯಕ ನಿರ್ದೇಶಕ ಪ್ರಮೋದ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜನಾರ್ಧನ ಇತರರು ಇದ್ದರು.
-ಚಿತ್ರಗಳು: ಲಕ್ಷ್ಮೀಶ್