ಗೋಣಿಕೊಪ್ಪಲು, ಜ.11: ಗೋಣಿಕೊಪ್ಪಲು ಆಟೋ ಚಾಲಕರು ಏಕ ಮುಖ ಸಂಚಾರ ವ್ಯವಸ್ಥೆಯಲ್ಲಿ ನಷ್ಟ ಸಂಭವಿಸಿದರೂ ನಿಗದಿತ ದರವನ್ನೆ ಪಡೆಯುತ್ತಿದ್ದೇವೆ.ಆದರೆ ದುರುದ್ದೇಶ ಪೂರಕವಾಗಿ ಚಾಲಕರಿಗೆ ಕೆಟ್ಟ ಹೆಸರನ್ನು ತರುವ ಉದ್ದೇಶದಿಂದ ಆದಾರ ರಹಿತವಾಗಿ ಗ್ರಾಮ ಪಂಚಾಯಿತಿ ಸದಸ್ಯ ಮುರುಗ ಅವರು ಹೇಳಿಕೆಯನ್ನು ನೀಡುವ ಮೂಲಕ ಗೊಂದಲ ಉಂಟುಮಾಡಿದ್ದಾರೆ. ಇವರ ಹೇಳಿಕೆಯನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ.

ಯಾವದೇ ಆಟೋ ಚಾಲಕರು ದುಪ್ಪಟ್ಟು ದರ ವಸೂಲಿ ಮಾಡಿದ್ದಲ್ಲಿ ಬಹಿರಂಗಪಡಿಸಬೇಕು. ನಗರದಲ್ಲಿ ಏಕಮುಖ ಸಂಚಾರಕ್ಕೆ ಆಟೋ ಚಾಲಕರ, ಮಾಲೀಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಅಧ್ಯಕ್ಷ ಸಿ.ಕೆ. ಬೋಪಣ್ಣ, ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ, ಕಾರ್ಯದರ್ಶಿ ಸುರೇಶ್ ಕೆ.ವಿ.ಹೇಳಿಕೆಯಲ್ಲಿ ತಿಳಿಸಿದ್ದಾರೆ.