ಮಡಿಕೇರಿ, ಜ. 11: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಚ್ಚಿನಾಡು ಗ್ರಾಮದ ಸುಳ್ಳಿ ಎಂಬಲ್ಲಿ ಕಾಡು ಕೋಣವೊಂದು ಗುಂಡೇಟಿನಿಂದ ಸಾವಿಗೀಡಾಗಿದೆ. ಯಾರೋ ದುಷ್ಕರ್ಮಿಗಳು ಕಾಡು ಕೋಣವನ್ನು ಹತ್ಯೆಗೈದಿರುವ ಸುಳಿವು ಪಡೆದಿರುವ ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳ ಮಹಜರು ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಮುಂದುವರಿದಿದೆ.