ಸೋಮವಾರಪೇಟೆ, ಜ. 11: ತಾಲೂಕಿನ ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್ ಶಂಸುಲ್ ಉಲಾಮಾ ಮೈದಾನದಲ್ಲಿ ತಾ. 13ರಂದು ಮಜ್ಲಿಸುನ್ನೂರ್‍ನ 5ನೇ ವರ್ಷದ ವಾರ್ಷಿಕೋತ್ಸವ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಮಳ್ಳಲ್ಲಿ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೊಡ್ಲಿಪೇಟೆ ಎಸ್‍ಕೆಎಸ್‍ಎಸ್‍ಎಫ್ ಮತ್ತು ಎಸ್‍ವೈಎಸ್ ಸಮಾಜ ಸೇವಾ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಎಲ್ಲಾ ಧರ್ಮದವರೊಂದಿಗೂ, ಉತ್ತಮ ಬಾಂಧವ್ಯದೊಂದಿಗೆ ಕೆಲಸ ಮಾಡುತ್ತಿದೆ ಎಂದರು.

ನಿರ್ಗತಿಕ ಹೆಣ್ಣು ಮಕ್ಕಳ ಮದುವೆ, ಆರ್ಥಿಕವಾಗಿ ಹಿಂದುಳಿದಿರುವ ಜನಾಂಗದ ಕೆಲವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಸಮಿತಿಯು ಆಚರಿಸಿಕೊಂಡು ಬರುತ್ತಿದೆ. ಜಿಲ್ಲೆಯ 44 ಘಟಕಗಳ ಪೈಕಿ ನಮ್ಮ ಸಂಸ್ಥೆಯು ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿರುವ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ಕೇಂದ್ರ ಸ್ಥಾನದಿಂದ ಪ್ರಮಾಣ ಪತ್ರವನ್ನು ಪಡೆದಿದೆ ಎಂದು ಮಾಹಿತಿ ನೀಡಿದರು.

ತಾ. 13ರಂದು ರಾತ್ರಿ 8 ಗಂಟೆಗೆ ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭವನ್ನು ಖತೀಬರಾದ ಉಸ್ತಾದ್ ಮಹಮ್ಮದ್ ಫೈಜಿó ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್‍ಕೆಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷರಾದ ಇಬ್ರಾಹಿಂ ಬಾತಿಷ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಉಸ್ತಾದ್ ಸ್ವಾಲಿಹ್ ಅನ್ವರಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ತಾ. 14ರಂದು ರಾತ್ರಿ 8ಕ್ಕೆ ಕೇರಳದ ಎಸ್‍ಕೆಎಸ್‍ಎಸ್‍ಎಫ್ ಸದಸ್ಯರಾದ ಇಕ್ಬಾಲ್ ಮುಸ್ಲಿಯಾರ್ ‘ನಾನು ಕಂಡ ಮದೀನ’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ದುವಾ ಆಶೀರ್ವಚನವನ್ನು ಆನೆಕಲ್‍ನ ಸೈಯದ್ ಇಬ್ರಾಹಿಂ ಬಾತಿಷಾ ತಂಙಳ್ ನಡೆಸಿಕೊಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಬ್ದುಲ್ಲಾ ಫೈಜಿ, ಉಸ್ಮಾನ್ ಫೈಜಿ, ಮೊಯ್ದು ಫೈಜಿ, ಉಮ್ಮರ್ ಫೈಜಿ, ರಜಾಕ್ ಫೈಜಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಎಸ್‍ಕೆಎಸ್‍ಎಫ್ ಗೌರವ ಅಧ್ಯಕ್ಷರಾದ ಜಿ.ಎಂ.ಎ. ಸಿದ್ಧಿಕ್ ಹಾಜಿ, ಸದಸ್ಯರಾದ ಅಬ್ದುಲ್ ರೆಹಮಾನ್, ಆಸಿಫ್, ಮೊಹಮ್ಮದ್ ಜಹೀರ್ ಉಪಸ್ಥಿತರಿದ್ದರು.