ಕುಶಾಲನಗರ, ಜ. 11: ತನ್ನ ಸಾಕು ನಾಯಿ ಮೇಲೆ ಮಹಿಳೆಯೊಬ್ಬರು ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರದ ಕರಿಯಪ್ಪ ಬಡಾವಣೆಯ ನಿವಾಸಿ ಡ್ಯಾನಿ ಎಂಬವರು ಅಲ್ಲಿಯ ನಿವಾಸಿ ಶಿವಮ್ಮ ಎಂಬವರ ಮೇಲೆ ಹಲ್ಲೆ ನಡೆಸಿದ್ದು ಘಟನೆ ವಿಕೋಪಕ್ಕೆ ತೆರಳಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರಿಯಪ್ಪ ಬಡಾವಣೆ ನಿವಾಸಿ ಡ್ಯಾನಿ ತನ್ನ ಸಾಕು ನಾಯಿಗಳೊಂದಿಗೆ ತೆರಳುತ್ತಿದ್ದ ಸಂದರ್ಭ ಶಿವಮ್ಮ ಎಂಬವರು ಕಾರ್ಯನಿಮಿತ್ತ ಸಾಗುತ್ತಿದ್ದಾಗ ಡ್ಯಾನಿ ಅವರ ನಾಯಿ ಇವರ ಮೇಲೆರಗಿ ಬಂದಿದೆ. ಇದರಿಂದ ಭಯಭೀತರಾದ ಮಹಿಳೆ ಕಲ್ಲೊಂದನ್ನು ನಾಯಿಯತ್ತ ಬೀಸಿದ್ದಾರೆ. ಇದರಿಂದ ಕೋಪಗೊಂಡ ನಾಯಿಯ ಮಾಲೀಕ ಡ್ಯಾನಿ ಅವರು ಮಹಿಳೆಯ ಮೇಲೆ ಹಲ್ಲೆ ನಡೆಸಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಶಿವಮ್ಮ ಅವರ ತಲೆ, ಕೈ ಭಾಗಕ್ಕೆ ಏಟಾಗಿದ್ದು ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನೆÀ್ನಲೆಯಲ್ಲಿ ಮಹಿಳೆಯ ಕುಟುಂಬ ಸದಸ್ಯರು ನಾಯಿ ಮಾಲೀಕ ಡ್ಯಾನಿ ಅವರ ಮೇಲೆ ಪೊಲೀಸ್ ದೂರು ನೀಡಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.