ಮಡಿಕೇರಿ, ಜ. 10: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಮಕ್ಕಳಲ್ಲಿ ಮತ್ತು ಯುವಕ-ಯುವತಿಯರಲ್ಲಿ ಆತ್ಮಸ್ಥೈರ್ಯ, ಧೈರ್ಯ ತುಂಬುವ ನಿಟ್ಟಿನಲ್ಲಿ ಟುಲಿಪ್ ಸಂಸ್ಥೆಯು ಕೊಡಗಿನಲ್ಲಿ ವಿಕಾಸ್ ಜನ ಸೇವಾ ಟ್ರಸ್ಟ್ ಹಾಗೂ ಜೀವನದಾರಿ ಟ್ರಸ್ಟ್ ಸಹಯೋಗದಲ್ಲಿ ಪ್ರತಿಭೆ ಅನಾವರಣ ಕಾರ್ಯಕ್ರಮ ತಾ. 12 ರಂದು ಕುಶಾಲನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ. ಒಂದು ದಿನದ ಕಾರ್ಯಕ್ರಮದಲ್ಲಿ ವಿವೇಕಾನಂದರ ಕುರಿತು ಚರ್ಚಾ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ನಾಟಕ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಹಾಗೂ ರಸಮಂಜರಿ ಕಾರ್ಯಕ್ರಮಗಳು ನೆರವೇರಲಿದೆ. ಈ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಕ್ಕಳು, ಯುವಕ-ಯುವತಿಯರು ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಸರುಗಳನ್ನು (ಚಂದನ್: 9591904817 ಜಗ್ಗೇಶ್: 96323 30948) ನೋಂದಾಯಿಸಿ ಕೊಳ್ಳಬಹುದು. ಕಾರ್ಯಕ್ರಮ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಂತೇ ಬೋಧಿದತ್ತ, ಸಂಸ್ಥಾಪಕರು, ಅಷ್ಟಾಂಗ ಧ್ಯಾನ ಮಂದಿರ, ಮೈಸೂರು. ಮುಖ್ಯ ಅತಿಥಿಗಳಾಗಿ ಗಂಗಾ ಚಂಗಪ್ಪ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತರು, ಸಂಸ್ಥಾಪಕರು, ಸ್ವಸ್ಥ ವಿಶೇಷ ಶಾಲೆ, ಸುಂಟಿಕೊಪ್ಪ, ಡಾ. ಮಹಾಂತೇಶ್ ಪಾಟೀಲ್, ಯುವ ಸಾಹಿತಿಗಳು, ವಿಮರ್ಶಕರು, ಕವಿಗಳು, ಉಪನ್ಯಾಸಕರು, ಕನ್ನಡ ವಿಭಾಗ, ಸ್ನಾತ್ತಕೋತ್ತರ ಕೇಂದ್ರ, ಚಿಕ್ಕಳುವಾರ, ಮ.ವಿ.ವಿ. ಅತಿಥಿಗಳಾಗಿ ರಮೇಶ್, ಅಧ್ಯಕ್ಷರು, ವಿಕಾಸ್ ಜನ ಸೇವಾ ಟ್ರಸ್ಟ್, ಮಡಿಕೇರಿ. ಜೊತೆಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ನಾತ್ತಕೋತ್ತರ ಕೇಂದ್ರ, ಚಿಕ್ಕಳುವಾರ, ಇಲ್ಲಿನ ಸಮಾಜಕಾರ್ಯ ವಿಭಾಗದ ಉಪನ್ಯಾಸಕರುಗಳಾದ ನಟರಾಜು, ಲೋಕೇಶ್ ಭರಣಿ, ರಾಬಿನ್, ಹರಿಣಾಕ್ಷಿ ಅವರುಗಳು ಭಾಗವಹಿಸಲಿದ್ದಾರೆ.
ಅದೇ ದಿನ ಸಂಜೆ ಬಹುಮಾನ ವಿತರಣಾ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸ್ವಾಮಿ ಬೋಧಸ್ವರೂಪಾನಂದಾಜಿ, ಅಧ್ಯಕ್ಷರು, ರಾಮಕೃಷ್ಣ ಶಾರದ ಆಶ್ರಮ, ಪೊನ್ನಂಪೇಟೆ, ಬಿ.ಜಿ. ಅನಂತಶಯನ, ಸಲಹಾ ಸಂಪಾದಕರು, ಶಕ್ತಿ ದಿನಪತ್ರಿಕೆ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಡಾ. ನವೀನ್‍ಕುಮಾರ್, ಮಕ್ಕಳ ತಜ್ಞರು, ಆರ್.ಆರ್. ಆಸ್ಪತ್ರೆ, ಮಡಿಕೇರಿ. ಮುರುಗೇಶ ಎಸ್. ಸಮಾಜ ಕಾರ್ಯಕರ್ತರು, ಸಿ.ಬಿ.ಆರ್. ಸಂಯೋಜಕರು, ಸ್ವಸ್ಥ ಶಾಲೆ, ಸುಂಟಿಕೊಪ್ಪ, ಭಾಗವಹಿಸಲಿದ್ದಾರೆ ಎಂದು ಟುಲಿಪ್ ಟ್ರಸ್ಟಿನ ಅಧ್ಯಕ್ಷ ಚಂದನ್ ತಿಳಿಸಿದ್ದಾರೆ. ಈ ಕುರಿತು ನಡೆದ ಸಭೆಯಲ್ಲಿ ಟುಲಿಪ್ ಟ್ರಸ್ಟಿನ ಕಾರ್ಯದರ್ಶಿ ಸಹನಾ, ಖಜಾಂಚಿ ಜಗ್ಗೇಶ್, ಟ್ರಸ್ಟಿಗಳಾದ ಅಮುದಾ, ನಿರಂಜನ್ ರವರುಗಳು ಮತ್ತು ವಿಕಾಸ್ ಜನ ಸೇವಾ ಟ್ರಸ್ಟಿನ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆ: ಶಾಲಾ, ಕಾಲೇಜು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇಂದಿನ ಯುವಕರು ವಿವೇಕಾನಂದರ ಚಿಂತನೆಗಳ ಪ್ರಭಾವಿತರಾಗಿದ್ದಾರೆಯೇ ಹೇಗೆ ಹೌದು? ಹೇಗೆ ಅಲ್ಲ? ಪರ ಮತ್ತು ವಿರೋಧ.