ಗೋಣಿಕೊಪ್ಪಲು, ಜ. 10: ನಿಧಾನವಾಗಿ, ಮೃದುವಾಗಿ ಹೇಳಬೇಕಾದ ಮಾತುಗಳನ್ನು ಕೆಲವೊಮ್ಮೆ ಏರುಧ್ವನಿಯಲ್ಲಿ, ಜೋರಾಗಿ ನ್ಯಾಯಾಧೀಶರು ಹೇಳಬೇಕಾಗಿ ಬರುತ್ತದೆ. ಇದಕ್ಕೆ ಮೂಲ ಕಾರಣ ವಕೀಲರು, ಕಕ್ಷಿದಾರರಿಂದ ನ್ಯಾಯಾಧೀಶರ ಮೇಲೆ ಒತ್ತಡ ಏರ್ಪಟ್ಟ ಸಂದರ್ಭ. ನಿರೀಕ್ಷೆಗಳು ಬೇರೆ ಬೇರೆ ಇದ್ದಾಗ ನ್ಯಾಯಾಧೀಶರು ಉದ್ವೇಗದೊಂದಿಗೆ ಏರುಧ್ವನಿಯಲ್ಲಿ ಕೆಲವೊಮ್ಮೆ ಮಾತನಾಡಬೇಕಾಗಬಹುದು. ಇದಕ್ಕೆ ವಕೀಲರು ಅವಕಾಶ ನೀಡುವಂತಾಗ ಬಾರದು. ನ್ಯಾಯಾಧೀಶರು ಸರ್ವಧರ್ಮಧಾರಿ. ಈ ಬಗ್ಗೆ ಕವಿ ‘ಡಿವಿಜಿ’ ಅವರ ‘ಮಂಕುತಿಮ್ಮನ ಕಗ್ಗ’ದಲ್ಲಿ ವರ್ಣನೆ ಇದೆ. ವಕೀಲರು ಮತ್ತು ನ್ಯಾಯಾಧೀಶರ ನಡುವೆ ಸೌಹಾರ್ಧಯುತ ವಾತಾವರಣ ಅಗತ್ಯ ಎಂದು ವೀರಾಜಪೇಟೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಫ್‍ಎಂಸಿ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಪೆÇನ್ನಂಪೇಟೆ ವಕೀಲರ ಸಂಘದ ಆಶ್ರಯದಲ್ಲಿ ಜರುಗಿದ ಕ್ರೀಡೋತ್ಸವ ಹಾಗೂ ಸಂತೋಷಕೂಟದಲ್ಲಿ ಪಾಲ್ಗೊಂಡು ಅವರು ಅಭಿಪ್ರಾಯಪಟ್ಟರು. ಪೆÇನ್ನಂಪೇಟೆ ವಕೀಲರ ಸಂಘವು ಕಾರ್ಯ ಕ್ರಮವನ್ನು ಆಯೋಜಿಸಿದ್ದು, ನ್ಯಾಯಾಧೀಶರ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಪೆÇನ್ನಂಪೇಟೆ ವಕೀಲರ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
ಮಡಿಕೇರಿಯ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಧೀಶ ವಿಜಯಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯ ಉತ್ತಮ ವಾತಾವರಣದ ಪ್ರದೇಶದಲ್ಲಿ ಪೆÇನ್ನಂಪೇಟೆಯ ಸುಸಜ್ಜಿತ ನ್ಯಾಯಾಲಯ ನಿರ್ಮಾಣವಾಗಿದೆ. ವಕೀಲರು 2-3 ವರ್ಷದಲ್ಲಿ ಕೇಸು ಮುಗಿಸುವ ನಿಟ್ಟಿನಲ್ಲಿ ನ್ಯಾಯಾಧೀಶ ರೊಂದಿಗೆ ಸಹಕರಿಸುವಂತಾಗಬೇಕು. 10-20 ವರ್ಷ ಕಕ್ಷಿದಾರರನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಲ್ಲಿ ಏನು ನ್ಯಾಯ ಸಿಕ್ಕಂತಾಗುತ್ತದೆ. 10 ವರ್ಷಕ್ಕೂ ಅಧಿಕ ಕೇಸು ಮುಂದುವರಿವದು ವಿಷಾಧನೀಯ. ತುಂಬಾ ಹಳೆಯ ಕೇಸುಗಳ ಇತ್ಯರ್ಥಕ್ಕೆ ವಕೀಲರ ಸಹಕಾರ ಮುಖ್ಯ ಎಂದು ಹೇಳಿದರು.
ಪೆÇನ್ನಂಪೇಟೆಯ ನ್ಯಾಯಾಧೀಶ ಮೋಹನ್‍ಗೌಡ ರಜೆಯ ಮೇಲಿದ್ದಾಗ ತಾವು ಪೆÇನ್ನಂಪೇಟೆ ನೂತನ ನ್ಯಾಯಾಲಯ ಸಮುಚ್ಛಯದಲ್ಲಿ 4 ತಿಂಗಳು ಕಾರ್ಯನಿರ್ವಹಿಸಿದ ತೃಪ್ತಿ ಇದೆ ಎಂದು ಮಡಿಕೇರಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಬಿ.ಕೆ. ಮನು ನುಡಿದರು. ಇಲ್ಲಿಯ ವಕೀಲರ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನ್ಯಾಯಾಧೀಶ ರೊಂದಿಗೂ ಸೌಹಾರ್ಧ ಯುತವಾಗಿ ನಡೆದುಕೊಳ್ಳುತ್ತಿರುವದು ಪ್ರಶಂಶನೀಯ ಎಂದು ಹೇಳಿದರು.
ಕ್ರೀಡೋತ್ಸವ ವಿಜೇತರ ವಿವರ
ಪೆÇನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಎಸ್.ಡಿ. ಕಾವೇರಪ್ಪ ನೇತೃತ್ವದಲ್ಲಿ 9 ನೇ ವರ್ಷದ ಪೆÇನ್ನಂಪೇಟೆ ವಕೀಲರ ಸಂಘದ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ಕ್ರೀಡೋತ್ಸವದಲ್ಲಿ ವಿಜೇತರ ವಿವರ ಈ ಕೆಳಕಂಡಂತಿವೆ.
ಪುರುಷರ ಭಾರದ ಗುಂಡು ಎಸೆತ: ಸೂರಜ್ ಮುತ್ತಣ್ಣ (ಪ್ರಥಮ), ಅಪ್ಪಣ್ಣ (ದ್ವಿತೀಯ), ಮಹಿಳೆಯರ ವಿಭಾಗ: ಪ್ರತಿಷ್ಠಾ (ಪ್ರಥಮ), ಲೆಜಿಟ್ (ದ್ವಿತೀಯ) ಪುರುಷರ ಹಗ್ಗ ಜಗ್ಗಾಟ: ಅಪ್ಪಣ್ಣ ಮತ್ತು ತಂಡ ಪ್ರಥಮ. ಮಹಿಳೆಯರ ಹಗ್ಗ ಜಗ್ಗಾಟ: ಕಂಜಿತಂಡ ಅನಿತಾ ಮತ್ತು ತಂಡ ಪ್ರಥಮ.
ಪುರುಷರ ಬಾಂಬ್ ಇನ್ ದ ಸಿಟಿ: ಬಿ.ಆರ್. ವಿನೋದ್ (ಪ್ರಥಮ), ವಿ.ಎಸ್. ಸುರೇಶ್ (ದ್ವಿತೀಯ). ಮಹಿಳೆಯರ ಬಾಂಬ್ ಇನ್ ದ ಸಿಟಿ: ಸುಮಾ (ಪ್ರಥಮ), ಲೆಜಿಟ್ (ದ್ವಿತೀಯ)
ನ್ಯಾಯಾಧೀಶರ ನಡುವಿನ ಶೂಟಿಂಗ್: ಸೋಮವಾರಪೇಟೆ ಹಿರಿಯ ಶ್ರೇಣಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಮತ್ತು ವೀರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಧೀಶ (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಶಿವಾನಂದ್ ಲಕ್ಷ್ಮಣ್ ಅಂಚಿ ಇವರುಗಳನ್ನು ಜಂಟಿ ವಿಜೇತರೆಂದು ಘೋಷಣೆ.
ವಕೀಲರ ಶೂಟಿಂಗ್: ಮಂಜು (ಪ್ರಥಮ), ಕೆ.ಪಿ. ಬೋಪಣ್ಣ (ದ್ವಿತೀಯ), ಕೇರಂ ಸಿಂಗಲ್ ಮೆನ್ಸ್: ವಿನೋದ್ (ಪ್ರಥಮ), ಸಂಜೀವ್ (ದ್ವಿತೀಯ) ಕೇರಂ ವುಮೆನ್ಸ್: ಪ್ರತಿಷ್ಠಾ (ಪ್ರಥಮ), ಅನಿತಾ (ದ್ವಿತೀಯ) ಪುರುಷರ ಕೇರಂ ಡಬಲ್ಸ್; ಬಿ.ಆರ್. ವಿನೋದ್ - ಎಂ.ಸಿ. ಪೂವಣ್ಣ (ಪ್ರಥಮ) ಕೆ.ಬಿ. ಸಂಜೀವ - ಬಿ.ಎಂ. ಅಯ್ಯಪ್ಪ (ದ್ವಿತೀಯ)
ಚದುರಂಗ: ಎಸ್.ವಿ. ಸುರೇಶ್ (ಪ್ರಥಮ), ಕೆ.ಬಿ. ಸಂಜೀವ (ದ್ವಿತೀಯ) ಪುರುಷರ ಬ್ಯಾಡ್ ಮಿಂಟನ್ ಸಿಂಗಲ್ಸ್: ಕೆ.ಬಿ. ಸಂಜೀವ (ಪ್ರಥಮ), ಪುಟ್ಟರಾಜು (ದ್ವಿತೀಯ) ಮಹಿಳೆಯರ ಸಿಂಗಲ್ಸ್: ಅನಿತಾ (ಪ್ರಥಮ), ಪ್ರತಿಷ್ಠಾ (ದ್ವಿತೀಯ) ಕ್ರೀಡೋತ್ಸವ ಸಂಯೋಜನೆಯನ್ನು ಕ್ರೀಡಾಕಾರ್ಯ ದರ್ಶಿ ಎಂ.ಸಿ. ಪೂವಣ್ಣ ನಿರ್ವಹಿಸಿದರು.
- ಸುದ್ದಿ ಸಂಸ್ಥೆ