ಗೋಣಿಕೊಪ್ಪ ವರದಿ, ಜ. 10: ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲು ಬೆಸಗೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಓವರ್‍ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಪ್ರಥ್ಯು, 15 ಲಕ್ಷ ಅನುದಾನದಲ್ಲಿ ಸುಮಾರು 50 ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕ್ ನಿರ್ಮಿಸಲಾಗಿದ್ದು, ಸ್ಥಳೀಯರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.

ಈ ಸಂದರ್ಭ ಪೊನ್ನಪ್ಪಸಂತೆ ಗ್ರಾ.ಪಂ. ಅಧ್ಯಕ್ಷೆ ಉಲ್ಸಾದ್, ಸದಸ್ಯರುಗಳಾದ ರಾಬಿನ್ ಬೋಪಣ್ಣ, ಆರ್. ಬೋಜಮ್ಮ, ಮಹಾದೇವ ದೇವಸ್ಥಾನ ಸಮಿತಿ ಅಧ್ಯಕ್ಷ ಚೊಟ್ಟೆಕಾಳಪಂಡ ಮುದ್ದಪ್ಪ, ಸ್ಥಳೀಯರುಗಳಾದ ಅರಮಣಮಾಡ ಮನು ಮಾದಯ್ಯ, ಹರೀಶ್, ರಚನ್, ಪುಳ್ಳಂಗಡ ಪವನ್ ಉಪಸ್ಥಿತರಿದ್ದರು.