ಮಡಿಕೇರಿ, ಜ. 9: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಸಮಾಜ ಒಳಿತಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆಯಾಮಗಳು ಎಂಬ ಕೇಂದ್ರ ವಿಷಯದಡಿ, ಬೆಂಗಳೂರಿನ ಜಯನಗರದಲ್ಲಿರುವ ಎನ್.ಎಂ.ಕೆ. ಆರ್.ವಿ. ಕಾಲೇಜಿನ ಸಹಯೋಗ ದೊಂದಿಗೆ ಎರಡು ದಿನಗಳ ಕಾಲ ಫೆಬ್ರವರಿ 1 ಮತ್ತು 2 ರಂದು ಹನ್ನೊಂದನೇ ಪ್ರಧಾನ ಸಮ್ಮೇಳನ ನಡೆಯಲಿದೆ.

ಈ ಸಮ್ಮೇಳನದಲ್ಲಿ ಸಮ್ಮೇಳನದ ಪ್ರತಿನಿಧಿಗಳು ಭೌತ ಮತ್ತು ಗಣಿತ ವಿಜ್ಞಾನ, ರಸಾಯನ ಮತ್ತು ಜೀವ ವಿಜ್ಞಾನ, ಎಂಜಿನಿಯರಿಂಗ್ ಹಾಗೂ ಅಂತರ್ ಶಾಸ್ತ್ರೀಯ ವಿಜ್ಞಾನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಾತ್ಯಕ್ಷಿಕೆಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ. ತಜ್ಞ ಸಮಿತಿಯು ಆಯ್ಕೆ ಮಾಡಿದ ಅತ್ಯುತ್ತಮವಾದ ಪ್ರಾತ್ಯಕ್ಷಿಕೆಗಳಿಗೆ ನಗದು ಬಹುಮಾನ ನೀಡಲಾಗುವದು.

ಪ್ರತಿ ವಿಷಯದ 4 ಅತ್ಯುತ್ತಮವಾದ ಪ್ರಾತ್ಯಕ್ಷಿಕೆಗಳಿಗೆ, ಮಾದರಿಗಳಿಗೆ ನಗದು ಬಹುಮಾನ ಪ್ರಥಮ ರೂ. 15 ಸಾವಿರ, ದ್ವಿತೀಯ ರೂ. 10 ಸಾವಿರ ಹಾಗೂ 2 ಸಮಾಧಾನಕರ ಬಹುಮಾನ ತಲಾ ರೂ. 5 ಸಾವಿರ ನೀಡಲಾಗುವದು. ಸಮ್ಮೇಳನದ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಲು ಹಾಗೂ ಸಂಶೋಧನಾ ಪ್ರಾತ್ಯಕ್ಷಿಕೆಗೆಗಳ ಸಾರಾಂಶವನ್ನು ಸಲ್ಲಿಸಲು ತಾ. 19 ಕೊನೆಯ ದಿನವಾಗಿರುತ್ತದೆ.

ಆಸಕ್ತರು ಅರ್ಜಿಯನ್ನು ಇ-ಮೇಲ್ : ಟಿmಞಡಿv.ಞsಣಚಿ19 @gmಚಿiಟ.ಛಿom ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ವಿವರವನ್ನು ಅಕಾಡೆಮಿ ಅಥವಾ ಸಮ್ಮೇಳನದ ವೆಬ್‍ತಾಣ ತಿತಿತಿ.ಞsಣಚಿಛಿಚಿಜemಥಿ.iಟಿ/ತಿತಿತಿ.ಞsಣಚಿಛಿoಟಿಜಿeಡಿeಟಿಛಿe.ಛಿom ನಿಂದ ಪಡೆಯಬಹುದಾಗಿದೆ.

ಅಕಾಡೆಮಿಯ ಈ ಪ್ರಧಾನ ಸಮ್ಮೇಳನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ಖ್ಯಾತ ವಿಜ್ಞಾನಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ಖ್ಯಾತ ವಿಜ್ಞಾನಿ ಹಾಗೂ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯ ನಿವೃತ್ತ ನಿರ್ದೇಶಕ ಪದ್ಮಭೂಷಣ ಡಾ. ಬಿ.ಎ. ಶ್ರೀಕಂಠನ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವದು.

ಪ್ರಶಸ್ತಿ ಪುರಸ್ಕøತರಿಗೆ ರೂ. 1 ಲಕ್ಷ ಗಳ ನಗದು, ಚಿನ್ನದ ಪದಕ(ರೂ. 50 ಸಾವಿರ ಮಿತಿಯೊಳಗೆ) ಮತ್ತು ಸನ್ಮಾನ ಪತ್ರವನ್ನು ನೀಡಿ ಸಮ್ಮೇಳನದ ಸಮಾರಂಭದಲ್ಲಿ ಗೌರವಿಸಲಾಗುವದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ತಿಳಿಸಿದ್ದಾರೆ.