ಗೋಣಿಕೊಪ್ಪ ವರದಿ, ಜ. 9: ಪಾಲಿಬೆಟ್ಟ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛ ನೀರು ಕುಡಿಯಲು ಬಳಕೆಯಾಗುವಂತೆ ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ಎಲೆಕ್ಟ್ರಾನಿಕ್ ಫಿಲ್ಟರ್‍ನ್ನು ಕೊಡುಗೆಯಾಗಿ ನೀಡಲಾಯಿತು. ರೂ. 35 ಸಾವಿರ ಅನುದಾನದಲ್ಲಿ 35 ಲೀಟರ್ ಸಾಮಥ್ರ್ಯದ ಫಿಲ್ಟರ್‍ನ್ನು ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ ಹಾಗೂ ರೋಟರಿ ಪದಾಧಿಕಾರಿಗಳು ಹಸ್ತಾಂತರ ಮಾಡಿದರು.

ನಂತರ ದಿಲನ್ ಚೆಂಗಪ್ಪ ಮಾತನಾಡಿ, ಸ್ವಚ್ಛ ಕುಡಿಯುವ ನೀರು ಬಳಕೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು. ಈ ಸಂದರ್ಭ ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಸೈದು, ಮುಖ್ಯ ಶಿಕ್ಷಕಿ ವಿಮಲ, ಗ್ರಾಮದ ಪ್ರಮುಖರುಗಳಾದ ಕುಟ್ಟಂಡ ವಸಂತ್, ದೀಪಕ್, ರೋಟರಿ ಮಾಜಿ ಅಧ್ಯಕ್ಷೆ ಜಮುನಾ ಉಪಸ್ಥಿತರಿದ್ದರು.