ಶನಿವಾರಸಂತೆ, ಜ. 9: ಪಟ್ಟಣದ ವಿಘ್ನೇಶ್ವರ ವಿದ್ಯಾಸಂಸ್ಥೆ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಶ್ರವಣ ದೋಷ ನಿವಾರಣೆ ಮತ್ತು ನಿಯಂತ್ರಣ ಕಾರ್ಯಕ್ರಮ ಹಾಗೂ ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆ ನಡೆಯಿತು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಶ್ರವಣ ಭಾಗಗಳು, ಅವು ನಿರ್ವಹಿಸುವ ಕಾರ್ಯ, ಶ್ರವಣ ದೋಷಕ್ಕೆ ಕಾರಣ, ಮುಂಜಾಗ್ರತಾ ಕ್ರಮ ಹಾಗೂ ದೇಹದಲ್ಲಿನ ವಿವಿಧ ಅಂಗಾಂಗಗಳ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕ ಡಿ.ಆರ್. ವಿಶ್ವನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಹಾಯಕಿಯರಾದ ಮಂಜುಳಾ, ಸರಸ್ವತಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಭಾನುರಿಜ್ವಾನ್, ಶಿಕ್ಷಕರಾದ ಕೆ.ಪಿ. ಜಯಕುಮಾರ್, ಅಂಜನಪ್ಪ, ಸುಚಿತ್ರಾ, ಸವಿತಾ, ಶ್ರೀಕಲಾ ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಾದ ವಿ.ವಿ. ಸೌಜನ್ಯ ಪ್ರಥಮ, ಕೆ.ಎಸ್. ಸುಚಿತ್ರಾ ದ್ವಿತೀಯ ಹಾಗೂ ಪಿ.ಎ. ಸಂಜನಾ ತೃತೀಯ ಸ್ಥಾನ ಗಳಿಸಿದ್ದು, ಬಹುಮಾನ ಪಡೆದುಕೊಂಡರು.