ನವದೆಹಲಿ, ಜ.9: ತಲಚೇರಿಯಿಂದ ದಕ್ಷಿಣ ಕೊಡಗು ಮೂಲಕ ಮೈಸೂರಿಗೆ ರೈಲು ಮಾರ್ಗ ಕಲ್ಪಿಸಲು ಒಂದೆಡೆ ಪರಿಸರವಾದಿಗಳಿಂದ ತೀವ್ರ ವಿರೋಧ, ಪ್ರತಿಭಟನೆ ನಡೆದಿರುವಂತೆಯೇ ಇನ್ನೊಂದೆಡೆ ಈ ಯೋಜನೆಯ ಕುರಿತು ರೈಲ್ವೆ ಸಚಿವರೇ ಸಂಶಯ ವ್ಯಕ್ತಪಡಿಸಿರುವ ಬೆಳವಣಿಗೆ ನಡೆದಿದೆ.ಕೇರಳ ರಾಜ್ಯ ಸರಕಾರವು ಕೇರಳ ರೈಲು ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‍ಡಿಸಿಎಲ್)ದ ಮೂಲಕ ವರದಿ ತಯಾರಿಸಿ ಕೇಂದ್ರ ಸರಕಾರಕ್ಕೆ ಸಮ್ಮತಿಗಾಗಿ ಶಿಫಾರಸ್ಸು ಮಾಡಿತ್ತು. ಅಲ್ಲದೆ ಈ ಯೋಜನೆಗೆ ಒಪ್ಪಿಗೆ ನೀಡಲು ಕರ್ನಾಟಕ ಸರಕಾರದ ಮೇಲೆಯೂ ಒತ್ತಡ ಹೇರಿತ್ತು. ಆದರೆ, ಕೊಡಗು ಹಾಗೂ ಮೈಸೂರು ವಿಭಾಗದಲ್ಲಿ ಪರಿಸರವಾದಿ ಸಂಘಟನೆಗಳಿಂದ ವಿರೋಧ ವ್ಯಕ್ತಗೊಂಡಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಇನ್ನೂ ಈ ಯೋಜನೆಗೆÉ ಅಧಿಕೃತ ಒಪ್ಪಿಗೆ ನೀಡಿಲ್ಲ.ತಲಚೇರಿ-ಮೈಸೂರು ರೈಲು ಮಾರ್ಗದ ಬೆಳವಣಿಗೆ ಕುರಿತು ಕೇರಳದ ಸಂಸದ ರಾಮಚಂದ್ರನ್ ಮುಲ್ಲಪಳ್ಳಿ ಅವರು ಇದೀಗ ಲೊಕಸಭಾ ಕಲಾಪ ಸಂದರ್ಭ ಪ್ರಶ್ನೆಯೊಂದನ್ನು ಮುಂದಿರಿಸಿದರು. ಈ ಬಗ್ಗೆ ಸಂಸತ್‍ನಲ್ಲಿ ಪ್ರತಿಕ್ರಿಯಿಸಿದ ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ರಾಜೆನ್ ಗೋಹೈನ್ ಅವರು ಕುತೂಹಲಕಾರಿ ಅಂಶವನ್ನು ಬಹಿರಂಗಗೊಳಿಸಿದರು. ಕೇರಳದ ಕೆಆರ್‍ಡಿಸಿಎಲ್ ನೀಡಿರುವ ವರದಿಯಲ್ಲಿ ಯಾವದೇ ಕ್ಷೇತ್ರ ಸಮೀಕ್ಷೆಯ ಅಂಶಗಳಿಲ್ಲ. 2018 ರ ಜನವರಿಯಲ್ಲಿ ಈ ವರದಿ ತಯಾರಿಸಲಾಗಿದೆ. ಆದರೆÉ, ಈ ವರದಿ ತಯಾರಿಕೆಗೆÉ ಮುನ್ನ ಅಗತ್ಯವಾದ ಸ್ಥಳಗಳಿಗೆ ತೆರಳಿ ಪ್ರತ್ಯಕ್ಷ ಸಮೀಕ್ಷೆ ನಡೆಸಿಲ್ಲ. ರೈಲು ಮಾರ್ಗ ರಚಿಸಬೇಕಾದ ಸ್ಥಳಗಳಿಗೆ ತೆರಳದೆ ವರದಿ ತಯಾರಿಸಲಾಗಿದೆ ಎಂಬ ಕುತೂಹಲಕಾರಿ ವಿದ್ಯಮಾನವನ್ನು ಸಚಿವರು ಬಹಿರಂಗಗೊಳಿಸಿದರು. ಅಲ್ಲದೆ, ಈ ವರದಿಯಲ್ಲಿ ರೈಲು ಮಾರ್ಗ ನಿರ್ಮಾಣದಿಂದ ಆ ಸ್ಥಳಗಳಲ್ಲಿನ ಅರಣ್ಯ ಪ್ರದೇಶಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆÉ ಎಂಬ ಉಲ್ಲೇಖವಿಲ್ಲ.

(ಮೊದಲ ಪುಟದಿಂದ) ಪರಿಸರ ತಾಣಗಳು, ಸೂಕ್ಷ್ಮ ಪರಿಸರ ವಲಯಗಳ ಅಸ್ತಿತ್ವಕ್ಕೆ ಹಾಗೂ ರೈಲು ಮಾರ್ಗ ನಿರ್ಮಾಣದಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ವರದಿಯಲ್ಲಿ ಪ್ರಸ್ತಾಪಿಸಿಲ್ಲ ಎಂದು ಸಚಿವ ರಾಜೆನ್ ಗೋಹೈನ್ ವಿವರಿಸಿದರು. ಅವರು ತಮ್ಮ ಮಾತು ಮುಂದುವರಿಸಿ ಕರ್ನಾಟಕದ ಭಾಗದಲ್ಲಿಯೂ ಈ ರೈಲು ಮಾರ್ಗ ಮಧ್ಯೆ ಪ್ರವೇಶಗೊಳ್ಳುವದರಿಂದ ಆ ರಾಜ್ಯದ ಜನತೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕುರಿತು ತಮ್ಮ ಗಮನಕ್ಕೆ ಬಂದಿರುವದಾಗಿ ನುಡಿದರು.

ಈ ಹಿನ್ನೆಲೆಯಲ್ಲಿ ಕೆಆರ್‍ಡಿಸಿಎಲ್ ಸಂಸ್ಥೆ ಅರಣ್ಯ ಇಲಾಖಾ ಮಟ್ಟದಲ್ಲ್ಲಿರುವ ಅಡೆ ತಡೆಗಳನ್ನು ಸರಿಪಡಿಸಿಕೊಂಡು, ಸಂಬಂಧಿತ ಆಕ್ಷೇಪಣಾಕಾರರೊಂದಿಗಿನ ತೊಡಕುಗಳನ್ನು ನಿವಾರಿಸಿಕೊಂಡು, ಕರ್ನಾಟಕ ಸರಕಾರದೊಂದಿಗೂ ಮಾತುಕತೆ ನಡೆಸಿ ಬಳಿಕ ಸಮರ್ಪಕ ವರದಿಯನ್ನು ಕೇಂದ್ರಕ್ಕೆ ಸಲ್ಲ್ಲಿಸಿದರೆÉ ಆ ನಂತರ ಕೇಂದ್ರ ಸರಕಾರವು ಈ ಕುರಿತು ಗಮನಿಸುವದಾಗಿ ಸಂಸತ್‍ನಲ್ಲಿ ಸಚಿವರು ಪ್ರಕಟಿಸಿದರು.