ಮಡಿಕೇರಿ, ಜ. 9: ಕೊಡವ ಸಾಹಿತ್ಯ ಸಂಸ್ಕøತಿ ಆಚಾರ - ವಿಚಾರಗಳನ್ನು ಉಳಿಸಿ ಬೆಳೆಸುವ ಚಿಂತನೆಯೊಂದಿಗೆ 1994ರ ಏಪ್ರಿಲ್ ತಿಂಗಳಿನಲ್ಲಿ ಸರಕಾರ ರಾಜ್ಯದ ಇತರ ಅಕಾಡೆಮಿಗಳೊಂದಿಗೆ ಸ್ಥಾಪನೆ ಮಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು 2019ರ ಏಪ್ರಿಲ್ಗೆ 25 ವರ್ಷಗಳನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಅಕಾಡೆಮಿಯ ಬೆಳ್ಳಿ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಆಗಿನ ಮುಖ್ಯಮಂತ್ರಿಯಾಗಿದ್ದ ಎಂ. ವೀರಪ್ಪಮೊಯಿಲಿ ಅವರ ಅವಧಿಯಲ್ಲಿ ಸರಕಾರ ವಿಶಿಷ್ಟವಾದ ಕೊಡವ ಸಂಸ್ಕøತಿ, ಸಾಹಿತ್ಯದ ಬೆಳವಣಿಗೆ, ಪೋಷಣೆಯ ದೃಷ್ಟಿಯಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯನ್ನು ಪ್ರಾರಂಭಿಸಲಾಗಿತ್ತು.ಇದೀಗ ಅಕಾಡೆಮಿಗೆ 25 ವರ್ಷ ತುಂಬಲಿದ್ದು, ಮೇ ತಿಂಗಳಿನಲ್ಲಿ ಅಕಾಡೆಮಿಯ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರು ತಿಳಿಸಿದ್ದಾರೆ. ಅಕಾಡೆಮಿಯ ಈಗಿನ ಆಡಳಿತ ಮಂಡಳಿಯು ಒಂದು ವರ್ಷದ ಅವದಿಯನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಂದು ಅಕಾಡೆಮಿ ಆಡಳಿತ ಮಂಡಳಿಯು ನಗರದ ಹೊಟೇಲ್ ಚರ್ಚ್ ಸೈಡ್ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾಧ್ಯಮ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಅವರು ಹಲವು ಮಾಹಿತಿಗಳನ್ನು ನೀಡಿದರು. ತಮ್ಮ ಅಧ್ಯಕ್ಷತೆಯ ಆಡಳಿತ ಮಂಡಳಿಯು ಈ ಒಂದು ವರ್ಷದಲ್ಲಿ 17 ಕಾರ್ಯಕ್ರಮವನ್ನು ಮಾಡಿದೆ. ಕೊಡವ ಸಾಹಿತ್ಯ ಭಾಷೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳೊಂದಿಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಲ್ಲದೇ ಇದೇ ವರ್ಷದಲ್ಲಿ ಅಕಾಡೆಮಿಗೆ 25 ವರ್ಷ ತುಂಬಲಿರುವದರಿಂದ ಬೆಳ್ಳಿಹಬ್ಬವನ್ನು ಬಹಳ ಅದ್ಧೂರಿಯಿಂದ ಕೊಡವ ಭಾಷಿಕರೊಡನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಒಂದು ವರ್ಷದಲ್ಲಿ ನೂತನ ಆಡಳಿತ ಮಂಡಳಿ ತಜ್ಞರೊಂದಿಗೆ ಸಂವಾದ, ಪಂದ್ಯಂಡ ಬೆಳ್ಯಪ್ಪ ಸ್ಮರಣೆ ಹಾಗೂ ವಿಚಾರಗೋಷ್ಠಿ, ಕೊಡವ ಕಳಿನಮ್ಮೆ, ಸಾಹಿತ್ಯ ಶಿಬಿರ ಹಾಗೂ ಸಂವಾದ, ಕೊಡವ ತೀನಿ ನಮ್ಮೆ, ಬೇಲ್ನಮ್ಮೆ, ಬಾಳೋ ಬಾಳೋ ಜಬ್ಬೂಮಿ, ಕಾವೇರಿ ತೀರ್ಥಪೂಜೆ ಮತ್ತು ಪರಿಕರ ವಿತರಣೆ ಸೇರಿದಂತೆ 17 ಕಾರ್ಯಕ್ರಮವನ್ನು ಹಮ್ಮಿಯಾಲ,
(ಮೊದಲ ಪುಟದಿಂದ) ಗೋಣಿಕೊಪ್ಪ, ಬಿರುನಾಣಿ, ನಾಪೋಕ್ಲು, ಮಡಿಕೇರಿ ಸೇರಿದಂತೆ ವಿವಿಧ ಕಡೆ ಹಮ್ಮಿಕೊಂಡಿದ್ದಾಗಿ ತಿಳಿಸಿದರು. ಒರೇ ಬಳ್ಳಿರ ಪೂ, ತ್ೀಂದ ಬದ್ಕ್, ಭೂಲೋಕತ್ರ ಜನ್ಮ, ಪೊಂಗುರಿ ತ್ರೈಮಾಸಿಕ ಸಂಚಿಕೆಯನ್ನು ಹೊರತಂದಿರುದಾಗಿ ಮಾಹಿತಿ ನೀಡಿದರು.
ಮುಂದಿನ ಎರಡು ವರ್ಷಗಳ ಆಡಳಿತ ಅವಧಿಯಲ್ಲಿ ಬೆಳ್ಳಿ ಹಬ್ಬ ಸೇರಿದಂತೆ ಶಾಲೆಗಳಲ್ಲಿ ಮಕ್ಕಳಿಗೆ ಕೊಡವ ಆಚಾರ ವಿಚಾರ ಹಾಗೂ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ಆಟ್ಪಾಟ್ ಪಡಿಪು ಕಾರ್ಯಕ್ರಮ, ಭಾಷಿಕ ಜನಾಂಗದ ಸಮಾಜ, ಸಂಘ ಸಂಸ್ಥೆಗಳೊಂದಿಗೆ ಹಲವು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು. ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಪುಸ್ತಕ ಹಾಗೂ ಕೊಡವ ಭಾಷೆಯ ಹಾಡುಗಾರರನ್ನು ಗುರುತಿಸಿ ಕೊಡವ ಹಾಡಿನ ಸಿ.ಡಿ.ಗಳನ್ನು ಹೊರತರ ಲಾಗುವದು. ಇದರೊಂದಿಗೆ ಜಿಲ್ಲೆ ಸೇರಿದಂತೆ ಮೈಸೂರು, ಬೆಂಗಳೂರು ಹಾಗೂ ಹೊರಜಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಅನುದಾನ ಹೆಚ್ಚಳಕ್ಕೆ ಮನವಿ
ವಾರ್ಷಿಕವಾಗಿ ಅಕಾಡೆಮಿಗೆಂದು ನಾಲ್ಕು ಕಂತುಗಳಲ್ಲಿ 60 ಲಕ್ಷ ರೂ. ಬಿಡುಗಡೆಯಾಗುತ್ತದೆ. ಇದರಲ್ಲಿ ಸಿಬ್ಬಂದಿ ವೇತನ, ಕಟ್ಟಡ ಬಾಡಿಗೆ ಸೇರಿದಂತೆ ಕಾರ್ಯಕ್ರಮವನ್ನು ಕ್ರಿಯಾಯೋಜನೆಯಂತೆ ನಡೆಸಿಕೊಂಡು ಹೋಗಲಾಗುತ್ತಿದೆ. 60 ಲಕ್ಷದಿಂದ ಅನುದಾನವನ್ನು ಮುಂದಿನ ದಿನದಲ್ಲಿ 70 ಲಕ್ಷಕ್ಕೆ ಏರಿಸಲು ಅಕಾಡೆಮಿಯಿಂದ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರದ ಸ್ಪಂದನ ಸಿಗುವ ಭರವಸೆಯಿದೆ ಎಂದರು.
ಅಕಾಡೆಮಿ ವತಿಯಿಂದ ಇದುವರೆಗೆ 11 ಸಂಸ್ಥೆಗೆ ದುಡಿ ಎಂಬ ಪರಿಕರವನ್ನು ವಿತರಿಸಲಾಗಿದೆ. ಇನ್ನು ಮುಂದೆ ದುಡಿ ವಿತರಿಸುವ ಸಂದರ್ಭ ಆಯಾ ಜನರು ತಮ್ಮ ಕಲೆಯನ್ನು ಪ್ರದರ್ಶಿಸಬೇಕು. ನಂತರವಷ್ಟೇ ಅಕಾಡೆಮಿ ಪರಿಕರ ವಿತರಣೆ ಮಾಡಲಿದೆ ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮತನಾಡಿ, ಮುಂದಿನ ದಿನ ದಲ್ಲಿಯೂ ಅಕಾಡೆಮಿ ಜನಾಂಗ ದವರೊಂದಿಗೆ ಒಗ್ಗೂಡಿ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಲಿ ಎಂದರು.
ಅಕಾಡೆಮಿ ರಿಜಿಸ್ಟ್ರರ್ ಚಂದ್ರಹಾಸ ರೈ ಮಾತನಾಡಿ, ಭಾಷೆ ಬೆಳೆಯಬೇಕು, ಸಾಹಿತ್ಯ ಉಳಿಯಬೇಕು, ನಮ್ಮ ಜಾನಪದ ಸಂಸ್ಕøತಿ ಮುಂದು ವರೆಯಬೇಕು ಎಂಬ ಉದ್ದೇಶದಿಂದ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಅಕಾಡೆಮಿ ಸ್ವಯತ್ತ ಸಂಸ್ಥೆಯಾಗಿದ್ದು, ನಿರ್ಧಿಷ್ಟ ಉದ್ದೇಶಕ್ಕೆ ಕೆಲಸ ನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.