ಮಡಿಕೇರಿ, ಜ. 9: ಈಶ್ವರಿ ಸಾಹಿತ್ಯ ಬಳಗ ವತಿಯಿಂದ ಜನವರಿ, 27 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕ್ರಮ ನಡೆಯಲಿದ್ದು, ಭಾಗವಹಿಸಲು ಕವನ ವಾಚಿಸುವ ಕವಿಗಳು 16 ಸಾಲುಗಳು ಮೀರದಂತೆ ಎಸ್.ಕೆ. ಈಶ್ವರಿ, ವೈಪ್ ಆಫ್ ಸೈಮನ್ ಎಸ್. ಮೇಕೇರಿ ಗ್ರಾಮ, ಕಗ್ಗೋಡ್ಲು ಪೋಸ್ಟ್, ಮಡಿಕೇರಿ, ಕೊಡಗು ಜಿಲ್ಲೆ ಈ ವಿಳಾಸಕ್ಕೆ ತಾ. 22 ರೊಳಗೆ ಕಳುಹಿಸಬೇಕು. ಮೊಬೈಲ್ ನಂಬರ್, ವಿಳಾಸ ಸರಿಯಾಗಿ ನಮೂದಿಸಬೇಕು. ಹೆಚ್ಚಿನ ಮಾಹಿತಿಗೆ 9481370263 ಮತ್ತು 9480018526 ನ್ನು ಸಂಪರ್ಕಿಸಬಹುದು.