ಸುಂಟಿಕೊಪ್ಪ, ಜ. 9: ಇಲ್ಲಿನ ಪಂಪ್‍ಹೌಸ್ ಬಡಾವಣೆಯ ಬಡ ಕಾರ್ಮಿಕ ಇಬ್ರಾಹಿಂ ಎಂಬವರು ಕಳೆದ 3 ವರ್ಷಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಸೊಂಟದಿಂದ ಕೆಳಗೆ ಸ್ವಾಧೀನ ಕಳೆದುಕೊಂಡು ನಡೆದಾಡಲು ಆಗದೆ ಬಳಲುತ್ತಿದ್ದು, ಇಬ್ರಾಹಿಂ ಪತ್ನಿ ರಜಿಯಾ ಸ್ವಸ್ಥ ಸಂಸ್ಥೆಯ (ಪುನರ್ವಸತಿ ಕೇಂದ್ರದ) ಸಿ.ಬಿ.ಆರ್. ಮುರುಗೇಶ್ ಅವರನ್ನು ಭೇಟಿ ಮಾಡಿ ಗಾಲು ಕುರ್ಚಿ ನೀಡಿ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸ್ಪಂದಿಸಿದ ಮುರುಗೇಶ್ ಸ್ಥಳೀಯ ವಿಕಾಸ್ ಜನಸೇವಾ ಟ್ರಸ್ಟ್‍ನ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್ ಅವರನ್ನು ಭೇಟಿ ಮಾಡಿ ಕುಟುಂಬದ ಪರಿಸ್ಥಿತಿಯನ್ನು ತಿಳಿಸಿದ ಮೇರೆಗೆ ಇಬ್ರಾಹಿಂ ಅವರ ಮನೆಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರು ಮತ್ತು ಪಿ.ಡಿ.ಓ. ಮೇದಪ್ಪ ಅವರನ್ನು ಕರೆದುಕೊಂಡು ಹೋಗಿ ಅವರ ಸಮ್ಮುಖದಲ್ಲಿ ಗಾಲಿ ಕುರ್ಚಿಯನ್ನು ವಿತರಿಸಿದರು.

ಈ ಸಂದರ್ಭ ಇಬ್ರಾಹಿಂ ಅವರ ಮನೆಯ ಪರಿಸ್ಥಿತಿಯನ್ನು ನೋಡಿ ಮಾತನಾಡಿದ ವಿಕಾಸ್ ಜನಸೇವಾ ಟ್ರಸ್ಟ್‍ನ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್ ಮುಂದಿನ ದಿನಗಳಲ್ಲಿ ಮನೆಯ ಸುತ್ತಾ ಚರಂಡಿ ವ್ಯವಸ್ಥೆ ಹಾಗೂ ವಿಶೇಷಚೇತನ ಸ್ನೇಹಿ ಶೌಚಾಲಯವನ್ನು ಕಟ್ಟಿ ಕೊಡುವದಾಗಿ ಭರವಸೆ ನೀಡಿದರು.

ಈ ಸಂದರ್ಭ ಸ್ವಸ್ಥ ಸಂಸ್ಥೆಯ ಸಿ.ಬಿ.ಆರ್. ಸಂಯೋಜಕ ಮುರುಗೇಶ್ ಮಾತನಾಡಿ, ಮುಂದಿನ ವಾರದಲ್ಲಿ ವಿಶೇಷಚೇತನರ ಗುರುತಿನ ಚೀಟಿ ಹಾಗೂ ಮಾಸಿಕ ವೇತನವನ್ನು ಮಾಡಿಸಿ ಕೊಡುವದಾಗಿ ತಿಳಿಸಿದರು. ಈ ಸಂದರ್ಭ ಗ್ರಾಮಸ್ಥ ಕುಮಾರ್, ಹಿರಿಯ ನಾಗರಿಕರಾದ ಎಂ.ಎ. ವಸಂತ ಹಾಜರಿದ್ದರು.