ಸುಂಟಿಕೊಪ್ಪ, ಜ. 9: ಇಲ್ಲಿಗೆ ಸಮೀಪದ ಕೊಡಗರ ಹಳ್ಳಿ ಗ್ರ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸ್ಕೂಲ್ ಬಾಣೆ ಮತ್ತು ಕೊಡಗರ ಹಳ್ಳಿ ವಿಭಾಗದಲ್ಲಿ ಹಲವಾರು ವರ್ಷಗಳ ವಿದ್ಯುತ್ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.
ಈ ಗ್ರಾಮದ ಗ್ರಾಮಸ್ಥರು ಶಾಲಾಕಾಲೇಜು ಮಕ್ಕಳು ಸುಮಾರು 20 ವರ್ಷಗಳಿಂದ ವಿದ್ಯುತ್ ಪ್ರಸರಣದಲ್ಲಿ ವ್ಯತ್ಯಯ ಅನುಭವಿಸುತ್ತಿದ್ದರು. ಶಾಲಾಕಾಲೇಜು ಮಕ್ಕಳು ಪರೀಕ್ಷೆ ಸಮಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅಲ್ಲದೆ ಕಡಿಮೆ ಓಲ್ಟೇಜಿನಿಂದ ನೀರು ಪೂರೈಕೆಯಾಗದೆ ನೀರಿದ್ದು ನೀರಿಲ್ಲದಂತೆ ಕಷ್ಟ ಅನುಭವಿಸುತ್ತಿದ್ದರು. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದು ಇದೀಗ ಈಗಿನ ಆಡಳಿತ ಮಂಡಳಿಯ ಅಧ್ಯಕ್ಷರು ಹೆಚ್.ಇ.ಅಬ್ಬಾಸ್ ಹಾಗೂ ಸದಸ್ಯರ ಪ್ರಯತ್ನದಿಂದ ಚೆಸ್ಕಾಂ ಹಿರಿಯ ಅಧಿಕಾರಿUಳ ಸಹಕಾರದಿಂದ ಅತ್ಯಧಿಕ ಸಾಮಥ್ರ್ಯವುಳ್ಳ (63 ಕೆವಿ) ನೂತನವಾದ ಟ್ರಾನ್ಸಫಾರ್ಮರ್ ಅಳವಡಿಸುವ ಮೂಲಕ ಈ ಭಾಗದ ಗ್ರಾಮಸ್ಥರ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಟ್ರಾನ್ಸಫಾರ್ಮರ್ ಅಳವಡಿಸಲು ದಾನಿಗಳು, ಕಾಫಿಬೆಳೆಗಾರರಾದ ಶೈನಿಬೋಜಮ್ಮ ಸ್ಥಳದಾನ ನೀಡಿದ್ದು ಈ ಭಾಗದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯಿತಿ ಹೆಚ್.ಇ.ಅಬ್ಬಾಸ್, ಕಿರಿಯ ಅಭಿಯಂತರ ಎಂ.ಎಸ್. ಚಂದ್ರಪ್ಪ, ಗ್ರಾಮ ಪಂಚಾಯಿತಿ ಹೆಚ್.ಇ. ಅಬ್ಬಾಸ್,ಸದಸ್ಯರಾದ ಉಸ್ಮಾನ್, ಸಲೀಂ, ಜಯಲಕ್ಷ್ಮಿ, ಲಲಿತ, ಎನ್.ಡಿ.ನಂಜಪ್ಪ, ಪಂಚಾಯಿತಿ ಸಿಬ್ಬಂದಿ ಧನಂಜಯ, ಗ್ರಾಮಸ್ಥರಾದ ರಾಜೇಶ್, ವಿಜಯಕುಮಾರ್, ಚೆಸ್ಕಾಂ ಸಿಬ್ಬಂದಿಗಳು ಹಾಜರಿದ್ದರು.