ಗೋಣಿಕೊಪ್ಪ ವರದಿ, ಜ. 9 : ಹಾಕಿ ಇಂಡಿಯಾ ವತಿಯಿಂದ ಚೆನ್ನೈನಲ್ಲಿ ಆರಂಭಗೊಂಡಿರುವ ರಾಷ್ಟ್ರಮಟ್ಟದ ಬಿ. ಡಿವಿಜನ್ ಪುರುಷರ ಹಾಕಿ ಚಾಂಪಿಯನ್ಶಿಪ್ನಲ್ಲಿ ಹಾಕಿಕೂರ್ಗ್ ತಂಡ ಶುಭಾರಂಭ ಮಾಡಿದೆ. ಅಲ್ಲಿನ ಐಸಿಎಫ್ ಮೈದಾನದಲ್ಲಿ ಹಾಕಿ ಮಧ್ಯಭಾರತ್ ತಂಡದ ಎದುರು ಆಡಿದ ಮೊದಲ ಪಂದ್ಯದಲ್ಲಿ 9-0 ಗೋಲುಗಳ ಮೂಲಕ ಗೆಲವು ದಾಖಲಿಸಿತು. ಹಾಕಿಕೂರ್ಗ್ ಪರವಾಗಿ 12 ಹಾಗೂ 35 ನೇ ನಿಮಿಷಗಳಲ್ಲಿ ಎನ್. ಶ್ರೀಧರ್, 45 ಹಾಗೂ 60 ನೇ ನಿಮಿಷಗಳಲ್ಲಿ
(ಮೊದಲ ಪುಟದಿಂದ) ರೋಹನ್ ತಿಮ್ಮಯ್ಯ ತಲಾ ಜೋಡಿ ಗೋಲು ಹೊಡೆದು ಮಿಂಚಿದರು. ಉಳಿದಂತೆ 6 ನೇ ನಿಮಿಷದಲ್ಲಿ ಎಸ್.ಪಿ. ದೀಕ್ಷಿತ್, 37 ರಲ್ಲಿ ಪೂವಣ್ಣ, 40 ರಲ್ಲಿ ಪಿ.ಎ. ಮಾಚಯ್ಯ, 47 ರಲ್ಲಿ ಆರ್. ನಾಚಪ್ಪ, 58 ರಲ್ಲಿ ಸಿ.ಕೆ. ಉತ್ತಪ್ಪ ತಲಾ ಒಂದೊಂದು ಗೋಲು ಹೊಡೆದರು. ತಂಡದ ವ್ಯವಸ್ಥಾಪಕರಾಗಿ ಪಳಂಗಂಡ ಲವಕುಮಾರ್, ತರಬೇತುದಾರರಾಗಿ ಬೊಳ್ಳಂಡ ರೋಶನ್ ಪಾಲ್ಗೊಂಡಿದ್ದಾರೆ.