*ಗೋಣಿಕೊಪ್ಪಲು, ಜ. 9: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದಿಯಾ ಭೀಮಯ್ಯ ಬ್ಯಾಡ್ಮಿಂಟನ್ ನಲ್ಲಿ ಉತಮ ಸಾಧನೆ ತೋರಿದ್ದಕ್ಕಾಗಿ ಟಾಪ್ ಸ್ಪೋರ್ಟ್ಸ್ ಟ್ಯಾಲೆಂಟ್ ಆಫ್ ಕರ್ನಾಟಕ 2018ರ ಪ್ರಶಸ್ತಿ ಪಡೆದುಕೊಂಡಿದ್ದಾಳೆ.

ಗಮಾಟಿಕ್ಸ್ ವತಿಯಿಂದ ಖೇಲ್ ಫೌಂಡೇಷನ್ ಎನ್ ಎಸ್ ಆರ್ ಎಲ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಮ್ಯಾನೇಜ್‍ಮೆಂಟ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಟ್ಯಾಲೆಂಟ್ ಎಕ್ಸ್‍ಪ್ಲೋರೇಷನ್ ಅಂಡ್ ಪ್ರೊಮೋಷನ್ ಪ್ರೋಗ್ರಾಮ್‍ನಲ್ಲಿ ಈ ಪ್ರಶಸ್ತಿಗಳಿಸಿದ್ದಾಳೆ. ಇಂಡಿಯನ್ ಇನ್ಸ್ಟಿಟ್ಯೂಟ್ ಮ್ಯಾನೇಜ್‍ಮೆಂಟ್ ಸಂಸ್ಥೆಯ ಬೃಹತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿಯಾ ಭೀಮಯ್ಯಗೆ ಪ್ರಶಸ್ತಿ ವಿತರಿಸಲಾಯಿತು.

ದಿಯಾ ಭೀಮಯ್ಯ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಗೋಣಿಕೊಪ್ಪಲಿನ ಕುಸುಮ್ ಹಾಗೂ ಭೀಮಯ್ಯ ಅವರ ಪುತ್ರಿ.